ಕೆಪಿಎಸ್‌ಸಿಯು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿನ ಗ್ರೂಪ್-ಸಿ ಮೋಟಾರು ವಾಹನ ನಿರೀಕ್ಷಕರು-70 ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳ ನೇಮಕಾತಿಗಾಗಿ ನಡೆಸಲಿರುವ ಪರೀಕ್ಷೆಯ ಪ್ರವೇಶ ಪತ್ರ(KPSC MVI Hall Ticket 2025) ಮೇ.6ರಂದು ಬಿಡುಗಡೆ ಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗವು 2024ರ ಮಾರ್ಚ್ 14 ರಲ್ಲಿ ಅಧಿಸೂಚಿಸಲಾದ ರಾಜ್ಯ ಸಾರಿಗೆ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಮೋಟಾರು ವಾಹನ ನಿರೀಕ್ಷಕರುಹುದ್ದೆಗಳ ನೇಮಕಾತಿ ಸಂಬಂಧ ಮೇ.13,14 ರಂದು ಪರೀಕ್ಷೆ ನಡೆಯಲಿವೆ. ಆಯೋಗವು ಪರೀಕ್ಷೆಯ ವೇಳಾಪಟ್ಟಿ ಹಾಗೂ ಪ್ರವೇಶ ಪತ್ರವನ್ನು ವೆಬ್ಸೈಟ್ http://kpsc.kar.nic.in ನಲ್ಲಿ ಅಧಿಕೃತವಾಗಿ ಬಿಡುಗಡೆ ಬಿಡುಗಡೆ ಮಾಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.