ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಉಳಿಕೆ ಮೂಲ ವೃಂದ) 150 ಹುದ್ದೆಗಳ ನೇಮಕಾತಿಗೆ 1:3ರ ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಿಸಿದೆ.
ಆಯೋಗವು 2024ರ ಮಾರ್ಚ್ 15ರಂದು ಅಧಿಸೂಚಿಸಿ, ಡಿ.08ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸದರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು https://kpsc.kar.nic.in/eligibility-list.htmlನಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
How to Download KPSC PDO (RPC) Eligibility List 2025
ಪಿಡಿಓ ಆರ್‌ಪಿಸಿ ಅರ್ಹತಾ ಪಟ್ಟಿ ಪಿಡಿಎಫ್ ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
Kpsc Pdo Rpc Eligibility List 2025 Download Link
ಅಧಿಕೃತ ಜಾಲತಾಣ https://kpsc.kar.nic.in/ಕ್ಕೆ ಭೇಟಿ ನೀಡಿ
ನಂತರ ಮುಖಪುಟದಲ್ಲಿ “ಹೊಸದು ಏನು?/ What is New” ಎಂಬುದರ ಅಡಿಯಲ್ಲಿ “ದಿನಾಂಕ: 15.03.2024 ರಲ್ಲಿ ಆಯೋಗವು ಅಧಿಸೂಚಿಸಲಾದ ಗ್ರಾಮೀಣಾಭಿವೃಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (RPC) ಹುದ್ದೆಗಳಿಗೆ [1:3] ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ / 1:3 list of candidates eligible to the post of Panchayath Development Officer (RPC) for the notification dated:15-03-2024 is published” ಹುಡುಕಿ, ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಹತಾ ಪಟ್ಟಿ ಪಿಡಿಎಫ್ ಮಾಡಿಕೊಳ್ಳಬಹುದು.
ಅಥವಾ
ಮುಖಪುಟದಲ್ಲಿ ‘ಪಟ್ಟಿಗಳು‘ –>> “ಅರ್ಹತಾ ಪಟ್ಟಿಗಳು” –>> “eligibility list for the post panchayath development officer(rpc)” ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಹತಾ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.