KPTCL JSA, JPM [NKK] Provisional Selection List 2025
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ) ಮತ್ತು ಕಿರಿಯ ಪವರ್ಮ್ಯಾನ್ (ಎನ್.ಕೆ.ಕೆ) ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆ.6ರಂದು ಬಿಡುಗಡೆ ಮಾಡಿದೆ.
ಮೇ.5 ರಿಂದ 8 ರವರೆಗೆ 1:5 ರ ಅನುಪಾತದಲ್ಲಿ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಫ್ (Cut-off) ಅಂಕಗಳೊಂದಿಗೆ ಕವಿಪ್ರನಿನಿ ಅಧಿಕೃತ ವೆಬ್ಸೈಟ್ https://kptcl.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ಕವಿಪ್ರನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
How to Download KPTCL JSA, JPM [NKK] Provisional Selection List 2025?
ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಟ್-ಆಫ್ ಅಂಕಗಳನ್ನು ಪರಿಶೀಲಿಸುವ ವಿಧಾನ
• ಕವಿಪ್ರನಿನಿ ಅಧಿಕೃತ ವೆಬ್ಸೈಟ್ https://kptcl.karnataka.gov.in/662/recruitment-2024/kn ಗೆ ಭೇಟಿ ನೀಡಿ.
• ನೇಮಕಾತಿ 2024 – ವಿವರಗಳು ವಿಭಾಗದ ಕೆಳಗೆ ನೀಡಲಾಗಿರುವ
• ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ) ಹುದ್ದೆಯ ಕಟ್-ಅಫ್ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಎನ್ .ಕೆ.ಕೆ.)
• ಕಿರಿಯ ಪವರ್ಮ್ಯಾನ್ (ಎನ್.ಕೆ.ಕೆ) ಹುದ್ದೆಯ ಕಟ್-ಅಫ್ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಎನ್.ಕೆ.ಕೆ.)
• ನಿಮ್ಮ ಆಯ್ಕೆಯ ಹುದ್ದೆಯ ಕಟ್-ಅಫ್ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಎನ್.ಕೆ.ಕೆ.) ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರಿಶೀಲಿಸಿ.
ಆಕ್ಷೇಪಣೆ ಸಲ್ಲಿಸಲು ಅವಕಾಶ
ಸದರಿ ನೇಮಕಾತಿ ಸಂಬಂಧ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ) ಮತ್ತು ಕಿರಿಯ ಪವರ್ಮ್ಯಾನ್ (ಎನ್.ಕೆ.ಕೆ) ಹುದ್ದೆಗಳ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಮಂಜಸವಾದ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.
ಆಕ್ಷೇಪಣೆ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ತಮ್ಮ ಹೆಸರು ಹಾಗೂ ಅರ್ಜಿ ಸಂಖ್ಯೆಯೊಂದಿಗೆ ಆಕ್ಷೇಪಣೆಗಳಿದ್ದಲ್ಲಿ, ಸೂಕ್ತ ವಿವರ ಹಾಗೂ ದಾಖಲಾತಿಗಳೊಂದಿಗೆ ವಿಷಯಸೂಚಿಯಲ್ಲಿ ”ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ)/ಕಿರಿಯ ಪವರ್ಮ್ಯಾನ್ (ಎನ್.ಕೆ.ಕೆ) ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ” ಎಂದು ಕಡ್ಡಾಯವಾಗಿ ನಮೂದಿಸಿ 2025ರ ಆಗಸ್ಟ್ 16ರ ಸಂಜೆ 05.30 ರೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದಾಗಿರುತ್ತದೆ.
ವಿಳಾಸ
ನಿರ್ದೇಶಕರು (ಆಡಳಿತ ಮತ್ತು ಮಾಸಂ), ನಿಗಮ ಕಾರ್ಯಾಲಯ, ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು-560009
ಅಭ್ಯರ್ಥಿಗಳಿಗೆ ಗಮನಕ್ಕೆ
• ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಆಕ್ಷೇಪಣೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
• ಈ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕಾಗಿ ಬಾಕಿ ಉಳಿದಿರುವ ರಿಟ್ ಅರ್ಜಿ ಸಂಖ್ಯೆ: 200882/2025 ರಲ್ಲಿನ ಅಂತಿಮ ತೀರ್ಪಿಗೊಳಪಟ್ಟು ಪ್ರಕಟಿಸಲಾಗಿದೆ.
Ok