KREIS EMRS 2026: ಅಂತಿಮ ಫಲಿತಾಂಶ, ಮೆರಿಟ್ ಪಟ್ಟಿ ಪ್ರಕಟ
ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ಮಾ.01ರಂದು ನಡೆದ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಂಗಳವಾರ ಪ್ರಕಟಿಸಿದೆ.
ತಾತ್ಕಾಲಿಕ ಫಲಿತಾಂಶವನ್ನು ಮಾ.17ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಸ್ವೀಕೃತ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿ ಅಭ್ಯರ್ಥಿಗಳ ಅಂತಿಮ ಫಲಿತಾಂಶ ಹಾಗೂ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ(https://cetonline.karnataka.gov.in/kea/kreis2026)ದಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಸಿದೆ.
ಹಂತ-1 ಅಧಿಕೃತ ಜಾಲತಾಣhttps://cetonline.karnataka.gov.in/kea/ಕ್ಕೆ ಭೇಟಿ.
ಹಂತ-2 ನಂತರ ಮೆನು ಭಾಗದಲ್ಲಿ “ಪ್ರವೇಶಗಳು” ವರ್ಗದಲ್ಲಿ ನೀಡಲಾದ “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)/ ಏಕಲವ್ಯ ಮಾದರಿ ವಸತಿ ಶಾಲೆ (EMRS)) ಪ್ರವೇಶ – 2026” ವಿಭಾಗದಡಿ “KREIS /EMRS -2026 ಅಂತಿಮ ಫಲಿತಾಂಶ ಲಿಂಕ್. 24-03-2026” ಅಥವಾ “KREIS / EMRS 2026 ತಾತ್ಕಾಲಿಕ ಅರ್ಹತೆ ಪಟ್ಟಿ (24-03-2026)”
ಹಂತ-3 ಅಂತಿಮ ಫಲಿತಾಂಶ ನೋಡಲು ತಾವು ವಿದ್ಯಾರ್ಥಿಯ ಸ್ಯಾಟ್ಸ್ ಐಡಿ ಹಾಗೂ ಹುಟ್ಟಿದ ದಿನಾಂಕವನ್ನು ನಮೂದಿಸಬೇಕು.
ತಾತ್ಕಾಲಿಕ ಅರ್ಹತೆ ಪಟ್ಟಿಯ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು. ವಿದ್ಯಾರ್ಥಿಯ ಸ್ಯಾಟ್ಟ್ ಐಡಿ ಹಾಕಿ, ಮೆರಿಟ್ ಪರಿಶೀಲಿಸಿಕೊಳ್ಳಿ.