ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ ಬರುವ ವಿವಿಧ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗಾಗಿ ಮಾ.01ರಂದು ನಡೆದ ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ(ಮಾ.03) ಪ್ರಕಟಿಸಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/kreis2026.aspx ಮೂಲಕ ಕೀ ಉತ್ತರಗಳನ್ನು ಪರಿಶೀಲಿಸಬಹುದು. ಆಕ್ಷೇಪಣೆಗಳಿದ್ದಲ್ಲಿ ಮಾ.07ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.
ಪ್ರವೇಶ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಹೇಗೆ ಡೌನ್ಲೋಡ್ ಮಾಡುವುದು?
ಹಂತ-1 ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ.
ಹಂತ-2 ನಂತರ “ಪ್ರವೇಶಗಳು” ವಿಭಾಗದಲ್ಲಿ “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)/ ಏಕಲವ್ಯ ಮಾದರಿ ವಸತಿ ಶಾಲೆ (EMRS)) ಪ್ರವೇಶ – 2026” ಆಯ್ಕೆ ಮಾಡಿಕೊಳ್ಳಿ.
ಹಂತ-3 ತದನಂತರ “KREIS /EMRS -2026 ತಾತ್ಕಾಲಿಕ ಕೀ ಉತ್ತರಗಳು. 03-03-2026” ಲಿಂಕ್ ಮೇಲೆ ಒತ್ತುವ ಮೂಲಕ ಕೀ ಉತ್ತರಗಳ ಪಿಡಿಎಫ್ ಡೌನ್ಲೋಡ್ ಮಾಡಬಹುದು.
ಅಥವಾ
ಅಧಿಕೃತ ವೆಬ್ಸೈಟ್ನ ಮುಖಪುಟದ “ಇತ್ತೀಚಿನ ಪ್ರಕಟಣೆಗಳು” ವಿಭಾಗದಡಿ ನೀಡಲಾದ “03-03 KREIS /EMRS -2026 ತಾತ್ಕಾಲಿಕ ಕೀ ಉತ್ತರಗಳಿಗೆ ಪ್ರಕಟಣೆ .03-03-2026” ಲಿಂಕ್ ಮೇಲೆ ಒತ್ತುವ ಮೂಲಕವೂ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
Basic chub