ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಂಡಳಿ ನಿಯಮಿತ(KSCCF)ವು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ಫಾರ್ಮಾಸಿಸ್ಟ್(07), ಪ್ರಥಮ ದರ್ಜೆ ಗುಮಾಸ್ತ(10) ಹಾಗೂ ವಿಕ್ರಯ ಸಹಾಯಕ(17) ಸೇರಿದಂತೆ ಒಟ್ಟು 34 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಪಿಯುಸಿ ಡಿಪ್ಲೋಮಾ ಇನ್ ಫಾರ್ಮಾಸಿ, ಪದವಿ ಉದ್ಯೋಗಾಕಾಂಕ್ಷಿಗಳು ಅಧಿಕೃತ ಜಾಲತಾಣ https://virtualofficeerp.com/ksccf2026/instructionಕ್ಕೆ ಭೇಟಿ ನೀಡಿ. ಫೆಬ್ರವರಿ 07ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 07, 2026
ಶೈಕ್ಷಣಿಕ ಅರ್ಹತೆ:
✓ ಫಾರ್ಮಾಸಿಸ್ಟ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿಪ್ಲೋಮಾ ಇನ್ ಫಾರ್ಮಾಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
✓ ಪ್ರಥಮ ದರ್ಜೆ ಗುಮಾಸ್ತ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
✓ ವಿಕ್ರಯ ಸಹಾಯಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು.
ವಯಸ್ಸಿನ ಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 38 ವರ್ಷಗಳು • ಪ್ರವರ್ಗ 2ಎ, ಪ್ರವರ್ಗ2ಬಿ, ಪ್ರವರ್ಗ3ಎ, ಪ್ರವರ್ಗ 3ಬಿ – 41 ವರ್ಷಗಳು • ಪ.ಜಾ ಪ್ರ-ಎ/ಪ.ಜಾ ಪ್ರ-ಬಿ/ಪ.ಜಾ ಪ್ರ-ಸಿ/ಪ.ಪಂ/ಪ್ರವರ್ಗ-1 – 43 ವರ್ಷಗಳು
ವಯೋಮಿತಿ ಸಡಿಲಿಕೆ; ವಿಕಲಚೇತನರಿಗೆ ಹಾಗೂ ವಿಧವೆಯರಿಗೆ – 10 ವರ್ಷಗಳು
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಹ ಅಭ್ಯರ್ಥಿಗಳ ಮೆರಿಟ್ ಲಿಸ್ಟ್
ದಾಖಲೆ ಪರಿಶೀಲನೆ
ಸಂಬಳ:
ಹುದ್ದೆಗಳಿಗೆ ಅನುಗುಣವಾಗಿ 19,950ರೂ.ಗಳಿಂದ 52,650ರೂ. ವರೆಗೆ ಮಾಹೆಯಾನ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಫಾರ್ಮಾಸಿಸ್ಟ್ ಹುದ್ದೆಗೆ ₹25800 ರಿಂದ 52650 ಪ್ರಥಮ ದರ್ಜೆ ಗುಮಾಸ್ತ ಹುದ್ದೆಗೆ ₹21400 ರಿಂದ 45300 ವಿಕ್ರಯ ಸಹಾಯಕ ಹುದ್ದೆಗೆ ₹19950 ರಿಂದ 37900
ಅರ್ಜಿ ಶುಲ್ಕ:
ಪ.ಜಾತಿ ಪ್ರ-ಎ/ ಪ.ಜಾತಿ ಪ್ರ-ಬಿ/ ಪ.ಜಾತಿ ಪ್ರ-ಸಿ/ಪ.ಪಂ/ಪ್ರ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ – ₹500 + ಗೇಟ್ವೇ ಶುಲ್ಕಗಳು ಇತರೆ ವರ್ಗದ ಅಭ್ಯರ್ಥಿಗಳಿಗೆ – ₹1000+ ಗೇಟ್ವೇ ಶುಲ್ಕಗಳು
ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ;
• ಮೊದಲಿಗೆ ಅಭ್ಯರ್ಥಿಗಳು KSCCF ಅಧಿಕೃತ ಜಾಲತಾಣ https://virtualofficeerp.com/ksccf2026/loginಕ್ಕೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಮೂಲ ಮಾಹಿತಿಗಳನ್ನು ನಮೂದಿಸಿ.
• ಅಗತ್ಯವಿರುವ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ, ಹಾಗೂ ಅಗತ್ಯ ದಾಖಲಾತಿಗಳನ್ನು ಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.