ಪ್ರಸಕ್ತ ವರ್ಷದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್-2025)ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅಧಿಸೂಚನೆ ತಿಳಿಸಿದ್ದಾರೆ.
ಒಟ್ಟು 33 ವಿಷಯಗಳನೊಳಗೊಂಡ ಕೆಸೆಟ್ ಪರೀಕ್ಷೆಯು ನ.02 (ಭಾನುವಾರ)ರಂದು ನಡೆಯಲಿದೆ. ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದಿರುವವರು ಅಥವಾ ಪ್ರಸ್ತುತ ವರ್ಷದಲ್ಲಿ ಪ್ರಥಮ/ದ್ವಿತೀಯ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು https://cetonline.karnataka.gov.in/kea/ನ ಮೂಲಕ ಸೆ.24ರೊಳಗೆ ಸಲ್ಲಿಸಬಹುದು.
ಸಾಮಾನ್ಯ ವರ್ಗ, ಪ್ರವರ್ಗ 2-ಎ, 2-ಬಿ, 3-ಎ, 3-ಬಿ ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆ 1,000/- ರೂ. ಹಾಗೂ ಪ್ರವರ್ಗ-I, ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ 700/- ರೂ. ಅರ್ಜಿ ಶುಲ್ಕ ಭರಿಸಬೇಕು ಎಂದು ಅಧಿಸೂಚನೆಯಲ್ಲಿ ಅವರು ಮಾಹಿತಿ ನೀಡಿದ್ಧಾರೆ.
ಕೆಸೆಟ್-2025 ವೇಳಾಪಟ್ಟಿ ವಿವರ:
1) ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 01, 2025 (ಮುಂದೂಡಿಕೆ) 2) ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – 24.09.2025(ವಿಸ್ತರಣೆ) 3) ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – 25.09.2025(ವಿಸ್ತರಣೆ) 4) ಪ್ರವೇಶ ಪತ್ರ (Hall Ticket) ಬಿಡುಗಡೆ ದಿನಾಂಕ – 24.10.2025 5) ಪರೀಕ್ಷಾ ದಿನಾಂಕ – 02.11.2025
I am geetha
Vijayapur
Hi edu nana kanasu