KSET Final Key Answer 2024:ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) ಅಂತಿಮ ಕೀ ಉತ್ತರಗಳನ್ನು ಇಂದು (ಏಪ್ರಿಲ್ 4)ರಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು KSET ಅಂತಿಮ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ, KEA ಜನವರಿ 30, 2024 ರಂದು KSET ಪರೀಕ್ಷೆಗೆ ತಾತ್ಕಾಲಿಕ ಕೀ ಉತ್ತರಯನ್ನು ಬಿಡುಗಡೆ ಮಾಡಿತು, ಎಲ್ಲಾ ವಿಷಯಗಳಿಗೆ ಪ್ರತ್ಯೇಕವಾಗಿ PDF ರೂಪದಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದ್ದು , ಅಭ್ಯರ್ಥಿಗಳು ತಮ್ಮ ಉತ್ತರಗಳ ಜೊತೆಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಹಾಗಾದರೆ ಅಂತಿಮ ಕೀ ಉತ್ತರಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಮಾಹಿತಿ ಈ ಕೆಳಗಿನ ನೀಡಲಾಗಿದೆ.
KEA KSET ಲಿಖಿತ ಪರೀಕ್ಷೆಯನ್ನು ಜನವರಿ 13, 2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಪರೀಕ್ಷಾ ಪ್ರಾಧಿಕಾರವು ಇಂದು 42 ವಿಷಯಗಳನ್ನು ಒಳಗೊಂಡಿರುವ KSET ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದೆ.