2025ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶುಕ್ರವಾರ(ಅ.24) ಬಿಡುಗಡೆ ಮಾಡಿದೆ.
ನವೆಂಬರ್ 2 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಕೆಸೆಟ್ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಪತ್ರಿಕೆ ಮತ್ತು ವಿಷಯ ಪತ್ರಿಕೆ ಎಂಬ ಎರಡು ಪತ್ರಿಕೆಯನ್ನೊಳಗೊಂಡ ಪರೀಕ್ಷೆಯಿದಾಗಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/KEA_EXAM_PORTAL/Forms/Candidates/Loginನ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
ಕೆಸೆಟ್ ಹಾಲ್ ಟಿಕೆಟ್(KSET Hall Ticket 2025) ಡೌನ್ಲೋಡ್ ಮಾಡುವುದು ಹೇಗೆ.?
ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/indexnewಗೆ ಭೇಟಿ ನೀಡಿ
ನಂತರ “ಇತ್ತೀಚಿನ ಪ್ರಕಟಣೆಗಳು” ಅಡಿಯಲ್ಲಿ ಅಥವಾ “ಮುಖಪುಟ → ಪ್ರವೇಶಗಳು → ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)-2025“ನ ಅಡಿ ನೀಡಲಾದ “ಕೆಎಸ್ಇಟಿ – 2025 ಪರೀಕ್ಷಾ ಹಾಲ್ ಟಿಕೆಟ್ ಡೌನ್ಲೋಡ್ ಲಿಂಕ್. 24-10-2025” ಲಿಂಕ್ ಮೇಲೆ ಒತ್ತಿ.
Kea Exam Hall Ticket 2025 Link
ಮುಂದೆ “ಪರೀಕ್ಷೆ/Examination, ಅರ್ಜಿ ಸಂಖ್ಯೆ /Application NO:, ಅಭ್ಯರ್ಥಿಯ ಹೆಸರು/Applicant Name: ಹಾಗೂ ಕ್ಯಾಪ್ಚಾ ನಮೂದಿಸಿ/ Enter the captcha” ನಮೂದಿಸಿ “Submit/ಸಲ್ಲಿಸು” ಬಟನ್ ಒತ್ತುವ ಮೂಲಕ ಕೆಸೆಟ್ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
Good
KSET Hall Ticket 2025: ಕೆಸೆಟ್ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ