ರಾಜ್ಯದ ಪ್ರಮುಖ ಮೂಲ ಸೌಲಭ್ಯ ಅಭಿವೃದ್ಧಿ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ವ್ಯವಸ್ಥಾಪಕರ ವೃಂದದಲ್ಲಿ ಖಾಲಿ ಇರುವ ಕಂಪನಿ ಕಾರ್ಯದರ್ಶಿ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಆಫ್ಲೈನ್ ಮೂಲಕ ಆ.30ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಕೆಎಸ್ಐಐಡಿಸಿ ಕಾರ್ಯನಿರ್ವಾಹಕ ನಿರ್ದೇಶಕರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.
ಕಂಪನಿ ಸೆಕ್ರೆಟರಿಶಿಪ್ ಕೋರ್ಸ್ ಪೂರ್ಣಗೊಳಿಸಿರುವುದಕ್ಕೆ ಭಾರತದ ಕಂಪನಿ ಕಾರ್ಯದರ್ಶಿಗಳ ಸಂಸ್ಥೆಯಿಂದ (ಐಸಿಎಸ್ಐ) ಅಸೋಸಿಯೇಟ್ ಮೆಂಬರ್ಶಿಪ್ ಸರ್ಟಿಫಿಕೇಟ್ ಮತ್ತು ಐಸಿಎಸ್ಐ ಸದಸ್ಯರಾಗಲು ಇತರೆ ಅಗತ್ಯತೆಗಳನ್ನು ಹೊಂದಿರಬೇಕು.
ಸಂಬಂಧ ಪಟ್ಟ ಕ್ಷೇತ್ರದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದ ಕಾರ್ಯಾನುಭವ ಹೊಂದಿರಬೇಕು. ಹೆಚ್ಚುವರಿಯಾಗಿ ಎಲ್ಎಲ್ ಬಿ ವಿದ್ಯಾರ್ಹತೆ ಆಪೇಕ್ಷಣಿಯ.
ಅಭ್ಯರ್ಥಿಗಳ ಗಮನಕ್ಕೆ: ಅಭ್ಯರ್ಥಿಗಳು ಕನ್ನಡ ಭಾಷೆ ಮಾತನಾಡುವ ಓದುವ ಮತ್ತು ಬರೆಯುವ ಪರಿಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.
ವಯಸ್ಸಿನ ಮಿತಿ:
30-08-2025 ರಂತೆ;
• ಗರಿಷ್ಠ ವಯಸ್ಸಿನ ಮಿತಿ – 39 ವರ್ಷಗಳು
ಆಯ್ಕೆ ವಿಧಾನ:
ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ 107500-2700-115600-3100-134200-3500-155200-4000-167200ರೂ. ವರೆಗೆ (2024 ರ ಪರಿಷ್ಕೃತ ವೇತನ ಶ್ರೇಣಿ) ಆಧಾರದ ಮೇಲೆ ವೇತನವನ್ನು ನೀಡಲಾಗುತ್ತದೆ.
ಮೂಲವೇತನದ ಜೊತೆಗೆ ಡಿಎ, ಹೆಚ್ಆರ್ ಎ, ಎಸಿಸಿ ಭತ್ಯೆಗಳು ಮತ್ತು ಪಿಎಫ್, ಗ್ಯಾಚುಟಿ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಜಿಎಸ್ಎಲ್ಐ, ಮನೆ/ವಾಹನ/ಕಂಪ್ಯೂಟರ್ ಇತ್ಯಾದಿಗೆ ಮುಂಗಡಗಳನ್ನು ನಿಗಮದ ಸಂಬಂಧ ಪಟ್ಟ ನಿಯಮಗಳ ಅನುಸಾರ ನೀಡಲಾಗುವುದು.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
How to Apply for KSIIDC Company Secretary Recruitment 2025
ಅರ್ಜಿ ಸಲ್ಲಿಸುವ ವಿಧಾನ;
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರ, ರೆಸ್ಯೂಮ್, ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವೃತ್ತಿ ಅನುಭವದ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಆಗಸ್ಟ್ 30ರೊಳಗೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು.
ವಿಳಾಸ: ಸಹಾಯಕ ಪ್ರಧಾನ ವ್ಯವಸ್ಥಾಪಕರು (ಎ&ಪಿ) ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಐಐಡಿಸಿ),ಖನಿಜ ಭವನ’, 4ನೇ ಮಹಡಿ, ಪೂರ್ವ ಭಾಗ, ನಂ.49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-1