ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ 05 ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕರ (ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ಅಭ್ಯರ್ಥಿಗಳನ್ನು 11 ತಿಂಗಳು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಕ್ಟೋಬರ್ 29 ರೊಳಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನ/ಕಂಪ್ಯೂಟರ್ ವಿಜ್ಞಾನ/ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ/ದೂರಸಂಪರ್ಕ ವಿಷಯದಲ್ಲಿ ಬಿ.ಇ/ಬಿ.ಟೆಕ್/ಬಿ.ಸಿ.ಎ/ಎಂ.ಎಸ್ಸಿ/ಎಂ.ಸಿ.ಎ ಮತ್ತು ಯಾವುದೇ ಸಮಾನ ಅಥವಾ ಸಂಬಂಧಿತ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕನಿಷ್ಠ ಮಿತಿ – 25 ವರ್ಷಗಳು ಗರಿಷ್ಠ ಮಿತಿ – 35 ವರ್ಷಗಳು
ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳ ಶಾರ್ಟ್ಲಿಸ್ಟಿಂಗ್ ಲಿಖಿತ ಪರೀಕ್ಷೆ (ಅನ್ವಯಿಸಿದರೆ) ದಾಖಲೆ ಪರಿಶೀಲನೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ 50,000ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:
• ಬೆಂಗಳೂರು ನಗರ ಪೊಲೀಸ್ ಅಧಿಕೃತ ಜಾಲತಾಣ https://bcp.karnataka.gov.in/en ಕ್ಕೆ ಭೇಟಿ ನೀಡಿ.
• ಬಳಿಕ ಅಧಿಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ “ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕರ ಹುದ್ದೆಗೆ ಅಧಿಸೂಚನೆ -2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಹುದ್ದೆಯ ಅಧಿಸೂಚನೆ ಹಾಗೂ ಅರ್ಜಿ ನಮೂನೆ ಡೌನ್ಲೋಡ್ ಆಗುತ್ತದೆ.
• ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಂಡು;
ಅಭ್ಯರ್ಥಿಯ ಬಯೋಡೇಟ/ರೆಸ್ಯೂಮ್, ಒಂದು ಬಿಳಿ ಹಾಳೆಯ ಮೇಲೆ ಪಾಸ್ಪೋರ್ಟ್ ಅಳತೆಯ ಬಣ್ಣದ ಭಾವ ಚಿತ್ರವನ್ನು ಅಂಟಿಸಿ ಅದರ ಕೆಳಗೆ ಸಹಿ ಮಾಡಿರುವ ಮೂಲ ಪ್ರತಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಆಧಾರ್ ಕಾರ್ಡ್/ ಪಾನ್ ಕಾರ್ಡ್ /ಡ್ರೈವಿಂಗ್ ಲೈಸ್ನ್ (ದೃಢೀಕೃತ ಜೆರಾಕ್ಸ್ ಪ್ರತಿ), ಕೆಲಸದ ಅನುಭವದ ಪ್ರಮಾಣ ಪತ್ರ, ಮೌಲ್ಯ ಮಾಪನ ಹಾಳೆ, ಎಲ್ಲಾ ಕಾಲಂಗಳನ್ನು ಎಕ್ಸೆಲ್ ಶೀಟ್ನಲ್ಲಿ ಭರ್ತಿ ಮಾಡಿ upload ಮಾಡಿದ ಅರ್ಜಿಯನ್ನು ಇಲಾಖೆಯ depadminbcp@ksp.gov.in ಗೆ ಇ-ಮೇಲ್ ಕಳುಹಿಸಬಹುದು.
ಅಥವಾ
✓ ಈ ವಿಳಾಸಕ್ಕೆ– “ನಂ.01, ಇನ್ಫ್ರೆಂಟಿ ರಸ್ತೆ, ಪೊಲೀಸ್ ಆಯುಕ್ತರ ಕಛೇರಿ, ಬೆಂಗಳೂರು-560001” – ಅಕ್ಟೋಬರ್ 29ರೊಳಗೆ ಸಲ್ಲಿಸಬಹುದು.