KSRLPS ಯುವ ವೃತ್ತಿಪರರ ದಾಖಲಾತಿ ಪರಿಶೀಲನೆ

Published on:

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘವು ಯುವ ವೃತ್ತಿಪರರ(IFC- ಆಂಕರ್/ಯುವ ವೃತ್ತಿಪರ) ಹುದ್ದೆಗಳ ಭರ್ತಿಗಾಗಿ ನ.16ರಂದು ನಡೆಸಿದ್ದ ಲಿಖಿತ ಪರೀಕ್ಷೆಯಲ್ಲಿ ದಾಖಲಾತಿ ಪರಿಶೀಲನೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಡಿ.23 ಮತ್ತು 24ರಂದು ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ನಂ.4, 3ನೇ ಮಹಡಿ, ಮೈಶುಗರ್ ಕಟ್ಟಡ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ. ರಸ್ತೆ, ಬೆಂಗಳೂರು-560002ನಲ್ಲಿ ನಡೆಯಲಿರುವ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ. ಮೂಲ ದಾಖಲಾತಿಗಳ ಪರಿಶೀಲನೆಯಲ್ಲಿ ಅರ್ಹತೆ ಹೊಂದುವ ಅಭ್ಯರ್ಥಿಗಳಿಗೆ ಸದರಿ ಲಿಖಿತ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್‌ ಆಧಾರ ಮತ್ತು ಸರ್ಕಾರದ ಮೀಸಲಾತಿ ನಿಯಮಗಳನ್ವಯ ಸ್ಥಳ ನಿಯುಕ್ತಿಗಾಗಿ ಕೌನ್ಸಲಿಂಗ್‌ಗೆ ಹಾಜರಾಗಬೇಕು ಎಂದು ಸಂಜೀವಿನಿ-ಕೆಎಸ್‌ಆರ್‌ಎಲ್‌ಎಸ್ ಅಭಿಯಾನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಜರುಪಡಿಸಬೇಕಾದ ದಾಖಲೆಗಳು;

  • ಆಧಾರ್‌ ಕಾರ್ಡ್
  • ‌ಎರಡು ಪಾಸ್‌ಪೋರ್ಟ್‌ ಗಾತ್ರದ ಪೋಟೋ
  • ನವೀಕೃತ ರೆಸ್ಯೂಮೆ
  • ಎಲ್ಲಾ ಶೈಕ್ಷಣಿಕ ಸಾಲಿನ ಮೂಲ ಅಂಕಗಪಟ್ಟಿಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು

Important Direct Links:

KSRLPS Young Professional Document verification & Counselling letter Details PDFDownload
Official Websiteksrlps.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “KSRLPS ಯುವ ವೃತ್ತಿಪರರ ದಾಖಲಾತಿ ಪರಿಶೀಲನೆ”

Leave a Comment