ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಸ್ವ-ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ
ಮಲ್ಟಿ ಡಿಸಿಪ್ಲಿನರಿ ಟ್ರೈನಿಂಗ್ ಸೆಂಟರ್ (MDTC), ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC), MSME ಸಚಿವಾಲಯ ವಿಜಿನಾಪುರ, ದೂರವಾಣಿನಗರ, ಬೆಂಗಳೂರು ಮತ್ತು ಅದರ ಎಂಪಾನೆಲ್ಡ್ ವೃತ್ತಿಪರ ತರಬೇತಿ ಸಹವರ್ತಿಗಳು(PTAs) ಜಂಟಿ ಸಹಯೋಗದಲ್ಲಿ ವಿವಿಧ ಜಿಲ್ಲೆಯ ಸ್ಥಳಗಳಲ್ಲಿ ಸ್ವ-ಉದ್ಯೋಗ ಆಧಾರಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ನಿರುದ್ಯೋಗಿ ಯುವಕರು, ಮಹಿಳೆಯರು, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವ-ಸಹಾಯ ಗುಂಪುಗಳ ಅಭ್ಯರ್ಥಿಗಳಿಗೆ ಸ್ವ-ಉದ್ಯೋಗ ಆಧಾರಿತ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರು. ತರಬೇತಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳಿಗೆ PMEGP ಯೋಜನೆಯಡಿಯಲ್ಲಿ ಬ್ಯಾಂಕ್ಗಳ ಮೂಲಕ ಸಬ್ಸಡಿಯೊಂದಿಗೆ ಸಾಲ ಸೌಲಭ್ಯವನ್ನು ಸಹ ನೀಡಲಾಗುತ್ತದೆ.
ವಿವಿಧ ಸಂಸ್ಥೆಗಳಿಂದ ನೀಡಲಾಗುವ ಸ್ವ-ಉದ್ಯೋಗ ಆಧಾರಿತ ತರಬೇತಿಯ ವಿವರಗಳು
✓ ಬೆಂಗಳೂರು ಜಿಲ್ಲೆಯಲ್ಲಿ ಒದಗಿಸಲಾಗುವ ತರಬೇತಿಯ ವಿವರಗಳು;
• ಟೈಲರಿಂಗ್ ಮತ್ತು ಎಂಬ್ರಾಯಿಡರಿ ತರಬೇತಿಯನ್ನು ಮೂರು ತಿಂಗಳ ಅವಧಿಯವರೆಗೆ ನೀಡಲಾಗುತ್ತದೆ.
• ಬ್ಯೂಟಿಷಿಯನ್ ಹಾಗೂ ಕಂಪ್ಯೂಟರ್ ಬೇಸಿಕ್ ಕೋರ್ಸ್ ತರಬೇತಿಯನ್ನು ಒಂದು ತಿಂಗಳ ಅವಧಿಯವರೆಗೆ ನೀಡಲಾಗುತ್ತದೆ.
• ಪೇಪರ್ ಆರ್ಟಿಕಲ್ ತಯಾರಿಕೆ, ಹಣ್ಣು ಮತ್ತು ತರಕಾರಿ ಸಂಸ್ಕರಣೆ ಹಾಗೂ ಅಗರಬತ್ತಿ ತಯಾರಿಕೆ ತರಬೇತಿಯನ್ನು 10 ದಿನಗಳ ಅವಧಿಯವರೆಗೆ ನೀಡಲಾಗುತ್ತದೆ.
• ಬೇಸಿಕ್ ಬೇಕರಿ, ಬೇಸಿಕ್ ರಿನಿವೇಬಲ್ ಎನರ್ಜಿ, ಮನೆಯ ರಾಸಾಯನಿಕ ಉತ್ಪನ್ನಗಳು, ಖಾದಿ ಪ್ರಾಕೃತಿಕ್ ಪೈಂಟ್, ಆರಿ ಎಂಬ್ರಾಯ್ಡರಿ, ಹಾಗೂ ಬೇಸಿಕ್ ಜೇನುನೋಣ ಸಾಕಾಣಿಕೆ ತರಬೇತಿಯನ್ನು 5 ದಿನಗಳ ಅವಧಿಯವರೆಗೆ ನೀಡಲಾಗುತ್ತದೆ.
✓ ಕೋಲಾರ ಜಿಲ್ಲೆಯಲ್ಲಿ ಒದಗಿಸಲಾಗುವ ತರಬೇತಿಯ ವಿವರಗಳು;
• ಕಂಪ್ಯೂಟರ್ ಬೇಸಿಕ್ ಕೋರ್ಸ್ ತರಬೇತಿಯನ್ನು ಒಂದು ತಿಂಗಳ ಅವಧಿಯವರೆಗೆ ನೀಡಲಾಗುತ್ತದೆ.
✓ ಮೈಸೂರು ಜಿಲ್ಲೆಯಲ್ಲಿ ಒದಗಿಸಲಾಗುವ ತರಬೇತಿಯ ವಿವರಗಳು;
• ಮನೆಯ ರಾಸಾಯನಿಕ ಉತ್ಪನ್ನಗಳು ತರಬೇತಿಯನ್ನು 5 ದಿನಗಳ ಅವಧಿಯವರೆಗೆ ನೀಡಲಾಗುತ್ತದೆ.
ಮೇಲಿನ ಎಲ್ಲಾ ತರಬೇತಿಗಳನ್ನು ಹೊರತುಪಡಿಸಿ ಇನ್ನಿತರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಸಹ ಲಭ್ಯವಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದೂ.ಸಂ-080-25650285 ಹಾಗೂ ಮೊ.ಸಂ- 8105788431, 8299377420 ಅಥವಾ ಇಮೇಲ್ ಐಡಿ kvicbang@gmail.com ಅನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ತರಬೇತಿಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ನಿರುದ್ಯೋಗಿ ಯುವಕರು, ಮಹಿಳೆಯರು, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವ-ಸಹಾಯ ಗುಂಪುಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 16 ವರ್ಷಗಳು
ತರಬೇತಿಯ ಶುಲ್ಕ:
ತರಬೇತಿಗೆ ಅನುಗುಣವಾಗಿ 1000ರೂ. ಗಳಿಂದ 3,000ರೂ.ಗಳ ವರೆಗೆ ತರಬೇತಿಯ ಶುಲ್ಕವನ್ನು ನಿಗದಿಪಡಿಸಲಾಗಿದೆ.
ತರಬೇತಿ ನಂತರ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ
ಅಭ್ಯರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಭಾರತ ಸರ್ಕಾರದ ಪ್ರಮಾಣಪತ್ರಗಳನ್ನು ತರಬೇತಿದಾರರಿಗೆ ನೀಡಲಾಗುತ್ತದೆ ಹಾಗೂ PMEGP ಯೋಜನೆಯಡಿಯಲ್ಲಿ ಬ್ಯಾಂಕ್ಗಳ ಮೂಲಕ 15% ರಿಂದ 35% ರಷ್ಟು ಮಾರ್ಜಿನ್ ಹಣ (ಸಬ್ಸಿಡಿ) ದೊಂದಿಗೆ ಹಣಕಾಸಿನ ನೆರವು ಪಡೆಯಲು ಸಹಕಾರ ನೀಡಲಾಗುತ್ತದೆ.
ಸೇವಾ ವಲಯಕ್ಕೆ 20 ಲಕ್ಷರೂ. ವರೆಗೆ ಮತ್ತು ಉತ್ಪಾದನಾ ವಲಯಕ್ಕೆ 50 ಲಕ್ಷರೂ. ವರೆಗೆ ಯೋಜನಾ ವೆಚ್ಚದೊಂದಿಗೆ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಲು ಸಹಾಯ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಕೆಯ ಕುರಿತು ನಮಗೆ ಮಾಹಿತಿ ಸಿಕ್ಕಿರುವುದಿಲ್ಲ.. ಆದ್ದರಿಂದ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮಗಳ ಮುಂದೆ ನೀಡಲಾದ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.