ಕೇಂದ್ರೀಯ ವಿದ್ಯಾಲಯ ಸಂಘಟನೆಯು ಸೀಮಿತ ಇಲಾಖಾ ಪರೀಕ್ಷೆ (LDE) ಹಾಗೂ ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ (LDCE)ಯ ಮೂಲಕ ವಿವಿಧ ಬೋಧಕ ಮತ್ತು ಬೋಧಕೇತರ ವೃಂದದ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ಪ್ರಾಂಶುಪಾಲ, ಉಪ ಪ್ರಾಂಶುಪಾಲ, ಪಿಜಿಟಿ ಮತ್ತು ಟಿಜಿಟಿ ಶಿಕ್ಷಕ, ಹೆಡ್ ಮಾಸ್ಟರ್, ಸೆಕ್ಷನ್ ಆಫೀಸರ್ ಹಾಗೂ ಫೈನಾನ್ಸ್ ಆಫೀಸರ್ ಸೇರಿದಂತೆ ಇತರೆ 2499 ಹುದ್ದೆಗಳನ್ನು ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅಗತ್ಯ ಶೈಕ್ಷಣಿಕ ಅರ್ಹತೆ ಜೊತೆಗೆ ಕೆವಿಎಸ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಮಾತ್ರ ಸದರಿ ಪರೀಕ್ಷೆಗೆ ನೋಂದಣಿಗೆ ಅರ್ಹರು. ನಿಗದಿತ ದಾಖಲೆಗಳೊಂದಿಗೆ ಡಿ.26ರೊಳಗೆ ನೋಂದಣಿ ಮಾಡಲು ನಿಯಂತ್ರಣ ಅಧಿಕಾರಿ*ಗಳನ್ನು ಭೇಟಿ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
* KVSನ ಪ್ರಾಂಶುಪಾಲರು/ಪ್ರಭಾರ ಪ್ರಾಂಶುಪಾಲರು, ಪ್ರಾದೇಶಿಕ ಅಧಿಕಾರಿಗಳ ಉಪ ಆಯುಕ್ತರು, ZIET ನಿರ್ದೇಶಕರು, ಕೆ.ವಿ.ಎಸ್ ಪ್ರಧಾನ ಕಚೇರಿಯ ಸಹಾಯಕ ಆಯುಕ್ತರು (I/II/III) ಇವರೆಲ್ಲರೂ ನಿಯಂತ್ರಣ ಅಧಿಕಾರಿಗಳಾಗಿರುತ್ತಾರೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 12, 2025
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್, ಎಂ.ಎಡ್ (ಹುದ್ದೆಗೆ ಅನುಗುಣವಾಗಿ) ಹೊಂದಿರಬೇಕು ಜೊತೆಗೆ ಕಡ್ಡಾಯವಾಗಿ ಆಯಾ ಹುದ್ದೆಗಳಿಗೆ ಅನುಗುಣವಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರಬೇಕು.
ಇನ್ನಷ್ಟು ಹೆಚ್ಚಿನ ಸ್ಪಷ್ಟ ವಿವರಗಳಿಗಾಗಿ ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಕೃತ ಅಧಿಸೂಚನೆಯನ್ನು ಓದಿ.
ವಯೋಮಿತಿ:
ವಯಸ್ಸು, ಅನುಭವ ಮತ್ತು ಅರ್ಹತೆಯನ್ನು ಜನವರಿ 01, 2026 ರಂತೆ ಪರಿಗಣಿಸಲಾಗುತ್ತದೆ.
ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – ಸರ್ಕಾರಿ ನಿಯಮಗಳ ಪ್ರಕಾರ
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ/ ಪ್ರಾಯೋಗಿಕ ಪರೀಕ್ಷೆ (ಹುದ್ದೆಗಳಿಗೆ ಅನುಗುಣವಾಗಿ)
ಸಂದರ್ಶನ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಹುದ್ದೆಗಳಿಗೆ ಆಧಾರಿತವಾಗಿ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ (7ನೇ CPC ಪೇ ಮ್ಯಾಟ್ರಿಕ್ಸ್) ಪ್ರಕಾರ ಮಾಹೆಯಾನ ವೇತನ, ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಹಂತ-1 ಅರ್ಜಿ ಸಲ್ಲಿಸುವ ಸಿಬ್ಬಂದಿಗಳು ತಾವು ಸೇವೆ ಸಲ್ಲಿಸುತ್ತಿರುವ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪ್ರಾಂಶುಪಾಲರು/ಪ್ರಭಾರ ಪ್ರಾಂಶುಪಾಲರು, ಪ್ರಾದೇಶಿಕ ಅಧಿಕಾರಿಗಳ ಉಪ ಆಯುಕ್ತರು, ZIET ನಿರ್ದೇಶಕರು, ಕೆ.ವಿ.ಎಸ್ ಪ್ರಧಾನ ಕಚೇರಿಯ ಸಹಾಯಕ ಆಯುಕ್ತ(I/II/III)ರನ್ನು ಭೇಟಿ ಮಾಡಿ. (ಕಂಟ್ರೋಲಿಂಗ್ ಆಫೀಸರ್)
ಹಂತ-2 ನಿಮ್ಮ ದಾಖಲೆಗಳನ್ನು ಕಂಟ್ರೋಲಿಂಗ್ ಆಫೀಸರ್ ಪರಿಶೀಲನೆ ಮಾಡಿ, ನೋಂದಣಿ ಮಾಡಿಕೊಂಡ ನಂತರ ನಿಮಗೆ ಅರ್ಜಿ ಸಲ್ಲಿಕೆ ಲಿಂಕ್ ಅನ್ನು ನಿಮಗೆ ಇ-ಮೇಲ್ ಮಾಡಲಾಗುತ್ತದೆ.
ಹಂತ-3 ಮುಂದೆ ನೀವು ಅಲ್ಲಿ ಕೇಳಾದ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಹಂತ-4 ನೀವು ಅಂತಿಮವಾಗಿ ಸಲ್ಲಿಸಿದ ಅರ್ಜಿಯನ್ನು ನಿಗದಿತ ದಾಖಲೆಗಳ ಎರಡು ಸೆಟ್ ಪ್ರತಿಗಳನ್ನು ಕಂಟ್ರೋಲಿಂಗ್ ಆಫೀಸರ್ಗೆ ಸಲ್ಲಿಸಬೇಕು.