KVS, NVS ನೇಮಕಾತಿ ಪರೀಕ್ಷೆ; ಶ್ರೇಣಿ-1ರ ಪ್ರವೇಶ ಪತ್ರ ಬಿಡುಗಡೆ

Published on:

ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯ ವಿವಿಧ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಭರ್ತಿಗಾಗಿ ಜ.10, 11ರಂದು ನಡೆಸಲಿರುವ ಶ್ರೇಣಿ-1 ಪರೀಕ್ಷೆಯ ಪ್ರವೇಶ ಪತ್ರ ಗುರುವಾರ(ಜ.8) ಬಿಡುಗಡೆಯಾಗಿದೆ.

ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ದಿನ ಎರಡು ಪಾಳಿಗಳಲ್ಲಿ ಶ್ರೇಣಿ-1ರ ಪರೀಕ್ಷೆಗಳು ಜರುಗಲಿವೆ. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು NTA ಅಧಿಕೃತ ಜಾಲತಾಣ https://examinationservices.nic.in/AdmitCardService/ದಲ್ಲಿ ಲಭ್ಯವಿರುವ ಲಿಂಕ್‌ ಮೂಲಕ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಪರೀಕ್ಷಾ ವೇಳಾಪಟ್ಟಿ

• ದಿನಾಂಕ 10-01-2026 ರಂದು ಬೆಳಿಗ್ಗೆ 9.30 ರಿಂದ 11.30 ರವರೆಗೆ – ಪಿಆರ್‌ಟಿ, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಪ್ರಯೋಗಾಲಯ ಸಹಾಯಕ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

• ದಿನಾಂಕ 10-01-2026 ರಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಬಹು-ಕಾರ್ಯಕಾರಿ ಸಿಬ್ಬಂದಿ (ಮುಖ್ಯ ಕಚೇರಿ/ಆರ್‌ಒ ಕೇಡರ್) ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

• ದಿನಾಂಕ 11-01-2026 ರಂದು ಬೆಳಿಗ್ಗೆ 9.30 ರಿಂದ 11.30 ರವರೆಗೆ – ಸಹಾಯಕ ಆಯುಕ್ತರು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಪಿಜಿಟಿ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

• ದಿನಾಂಕ 11-01-2026 ರಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಟಿಜಿಟಿ ಮತ್ತು ಇತರೆ ಶಿಕ್ಷಕರು, ಗ್ರಂಥಪಾಲಕರು, ಆಡಳಿತ ಅಧಿಕಾರಿ, ಹಣಕಾಸು ಅಧಿಕಾರಿ, ಕಿರಿಯ ಅನುವಾದಕ, ಸಹಾಯಕ ಎಂಜಿನಿಯರ್, ಸಹಾಯಕ ವಿಭಾಗ ಅಧಿಕಾರಿ, ಹಿರಿಯ ಸಚಿವಾಲಯ ಸಹಾಯಕ, ಸ್ಟೆನೋ ಗ್ರಾ. I, ಸ್ಟೆನೋ ಗ್ರಾ. II ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವ ವಿಧಾನ

• ಅಭ್ಯರ್ಥಿಗಳು ಮೊದಲಿಗೆ NTA ಅಧಿಕೃತ ಜಾಲತಾಣ https://examinationservices.nic.in/AdmitCardService/Admitcard/Login?enc=jceiDD5eI/fkuWrvtzhL4O3SorfW2FjrNPJfimMxtcY=ಕ್ಕೆ ಭೇಟಿ ನೀಡಿ.

• ಪ್ರವೇಶ ಪತ್ರ ಪ್ರದರ್ಶನ ಶೀರ್ಷಿಕೆಯ ಕೆಳಗೆ ನೀಡಲಾಗಿರುವ “EMRS ಸಿಬ್ಬಂದಿ ಆಯ್ಕೆ ಪರೀಕ್ಷೆ-2025 – ಪ್ರವೇಶ ಕಾರ್ಡ್” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ 2599 ರಿಂದ ಪ್ರಾರಂಭವಾಗುವ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ನಂತರ “EMRS ಸಿಬ್ಬಂದಿ ಆಯ್ಕೆ ಪರೀಕ್ಷೆ-2025 ಪ್ರವೇಶ ಪತ್ರ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಪರೀಕ್ಷಾ ಕೇಂದ್ರದ ವಿವರಗಳನ್ನೊಳಗೊಂಡ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

KVS NVS Teaching and Non-Teaching Tier 1 Exam Admit Card 2026 LinkAdmit Card
KVS NVS Teaching and Non-Teaching Tier 1 Exam Admit Card 2026 Notice PDF (Dated on 8/1/26)Download
KVS Official Websitehttps://kvsangathan.nic.in/en/
NVS Official Websitehttps://navodaya.gov.in/nvs/en/Home1/
More UpdatesKarnatakaHelp.im
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “KVS, NVS ನೇಮಕಾತಿ ಪರೀಕ್ಷೆ; ಶ್ರೇಣಿ-1ರ ಪ್ರವೇಶ ಪತ್ರ ಬಿಡುಗಡೆ”

Leave a Comment