Labour Card: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ

Published on:

ಪ್ರಸಕ್ತ ಸಾಲಿನ ಶೈಕ್ಷಣಿಕ ಸಹಾಯಧಕ್ಕಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಳೆದ ಮೇ 25ರ ಮೊದಲು ನೋಂದಾಯಿಸಿಕೊಂಡಿರುವ ಕಾರ್ಮಿಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಎಸ್ಎಸ್​​ಪಿ(ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ) ಪೋರ್ಟಲ್ https://ssp.postmatric.karnataka.gov.in/ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್​ 31ರೊಳಗೆ ಸಲ್ಲಿಸಬೇಕು ಎಂದು ಮಂಡಳಿಯ ಮುಖ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

How to Apply for Labour Card Education Scholarship 2025?

ಅರ್ಜಿ ಸಲ್ಲಿಕೆ ಹೇಗೆ?: 2025-26ನೇ ಸಾಲಿನಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳು ಈಗಾಗಲೇ ಎಸ್​ಎಸ್​ಪಿ ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಸಹಾಯಧನ ಮೊತ್ತ ನೇರವಾಗಿ ಬ್ಯಾಂಕ್​ ಖಾತೆಗೆ ಜಮೆ ಮಾಡಲಾಗುತ್ತದೆ.

ಇದನ್ನೂ ಓದಿ: ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

ಸಹಾಯಧನ ತಪ್ಪದೇ ಪಡೆಯಲು ಈ ಕೆಲಸ ಮಾಡಿ

ಕಡ್ಡಾಯವಾಗಿ ಶೈಕ್ಷಣಿಕ ಸಹಾಯಧನ ಪಡೆಯಲು ಮಂಡಳಿಯ ಹೊಸ ವೆಬ್​ಸೈಟ್​ https://kbocwwb.karnataka.gov.in/ ಕಾರ್ಮಿಕ ಕಾರ್ಡ್​ ನೋಂದಣಿ ಸಂಖ್ಯೆ ನಮೂದಿಸಿ, ಆಧಾರ್​ ಲಿಂಕ್​ ಮಾಡಬೇಕು. ತಪ್ಪದೇ ಬ್ಯಾಂಕ್​ ಖಾತೆಗೆ ಆಧಾರ್​ ಕಾರ್ಡ್​ ಲಿಂಕ್​ ಮಾಡಿರಬೇಕು ಜೊತೆಗೆ ಕಡ್ಡಾಯವಾಗಿ ಎನ್​ಪಿಸಿಐ ಮ್ಯಾಪಿಂಗ್​ ಮಾಡಿಸಿರಬೇಕು.

ಗಮನಿಸಿ: ಕಾರ್ಮಿಕ ಕಾರ್ಡ್​ ಯಾರ ಹೆಸರಲ್ಲಿ ನೋಂದಣಿಯಾಗಿರುತ್ತದೆಯೋ ಅವರ(ನಿಮ್ಮ ತಂದೆ/ತಾಯಿ) ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತದೆ.

Important Direct Links:

Labour Card Scholarship 2025 Online Form LinkApply Now
Official Websitessp.postmatric.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

4 thoughts on “Labour Card: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ”

Leave a Comment