ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 60 ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಸೌಲಭ್ಯ(Labour Card Pension)ವನ್ನು ನೀಡುತ್ತದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಇಂತಹ 60 ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರ ಅನುಕೂಲಕ್ಕಾಗಿ ಮಂಡಳಿಯು ಪ್ರತಿ ತಿಂಗಳು 3000 ರೂ. ಮಾಸಿಕ ಪಿಂಚಣಿ ಸೌಲಭ್ಯವನ್ನು ಜಾರಿಗೆ ತಂದಿದ್ದು, ಫಲಾನುಭವಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಕುರಿತಂತೆ ಅರ್ಹತಾ ಮಾನದಂಡ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಪಿಂಚಣಿ ಮೊತ್ತದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಯೋಜನೆಯ ಅರ್ಹತಾ ಮಾನದಂಡಗಳು:
- ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು 60 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು.
- ನೋಂದಾಯಿತ ಕಟ್ಟಡ ಕಾರ್ಮಿಕ 60 ವರ್ಷ ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 3 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.
- ಫಲಾನುಭವಿಯು 60 ವರ್ಷ ಪೂರೈಸಿದ ಆರು ತಿಂಗಳ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕು.
- ಫಲಾನುಭವಿಯು ಸರ್ಕಾರದ ಇತರೆ ಯೋಜನೆಯಡಿ ಇದೇ ತರಹದ ಯಾವುದೇ ಸೌಲಭ್ಯವನ್ನು ಪಡೆದಿರಬಾರದು.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ.
- ಉದ್ಯೋಗದ ದೃಢೀಕರಣ ಪತ್ರ
- ಜೀವಿತ ಪ್ರಮಾಣ ಪತ್ರ.
- ರೇಷನ್ ಕಾರ್ಡ್ ಪ್ರತಿ.
- ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಭಾವಚಿತ್ರವುಳ್ಳ ಪ್ರತಿ.
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
ಪಿಂಚಣಿ ಮೊತ್ತ:
ಫಲಾನುಭವಿಯ ಖಾತೆಗೆ ಪ್ರತಿ ತಿಂಗಳು 3000ರೂ.ಗಳನ್ನು ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: ಹೊಸ ಲೇಬರ್ ಕಾರ್ಡ್: Karnataka Labour Card Online Application Form 2025
How to Apply for Labour Card Pension 2025?
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ;
- ಫಲಾನುಭವಿಯು ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಸೈಬರ್ ಸೆಂಟರ್ ಗೆ ಭೇಟಿ ನೀಡಿ. ಅಥವಾ ನೀವೇ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ನೀಡಲಾಗಿದೆ.
- ಲೇಬರ್ ಆನ್ ಲೈನ್ ಪೋರ್ಟಲ್ ಮೂಲಕ ಪಿಂಚಣಿ ಯೋಜನೆಗೆ ಕೇಳಲಾಗುವ ಮಾಹಿತಿ ನೀಡಿ ಅಗತ್ಯವಿರುವ ದಾಖಲೆಗಳನ್ನು
- ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಸಲ್ಲಿಸಿದ ಅರ್ಜಿಯನ್ನು ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ಮಾಡಲಾಗುತ್ತದೆ.
ನಂತರ ಸಹಾಯಕ ಕಾರ್ಮಿಕ ಆಯುಕ್ತರಿಂದ ಅನುಮೋದನೆ ಮಾಡಲಾಗುತ್ತದೆ.
Important Direct Links:
Labour Card Pension 2025 Online Form Link | Apply Now |
Official Website | karbwwb.karnataka.gov.in |
More Updates | Karnataka Help.in |