Labour Card Renewal 2024 Online (New Process): ಲೇಬರ್ ಕಾರ್ಡ್ Renewal ಮಾಡುವುದು ಹೇಗೆ?

Follow Us:

Labour card Renewal Online 2024: ನಮಸ್ಕಾರ ಬಂಧುಗಳೇ, ಈ ಲೇಖನದಲ್ಲಿ “ಲೇಬರ್ ಕಾರ್ಡ್ Renewal ಮಾಡುವುದು ಹೇಗೆ?” ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.

ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರ ಅಭಿವೃದ್ಧಿಗಾಗಿ ಕಾರ್ಮಿಕ ಕಾರ್ಡ್ ಮೂಲಕ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಾಯಧನ, ವಿಮೆ ಯೋಜನೆಗಳು ಇನ್ನು ಹತ್ತು ಹಲವು ಸೌಲಭ್ಯಗಳನ್ನು ಈ ಕಾರ್ಡ್ ನ ಮೂಲಕ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ನೀಡುತ್ತಾ ಬಂದಿದೆ. ನಕಲಿ ಅಸಲಿಗಿಂತ ನಕಲಿ ಕಾರ್ಮಿಕ ಕಾರ್ಮಿಕ ಕಾರ್ಡ್ ಗಳು ರಾಜ್ಯದಲ್ಲಿ ಹೆಚ್ಚಿದ್ದು, ಇದನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರವು ಕಾಲಕಾಲಕ್ಕೆ ಕಾರ್ಮಿಕರ ಕಾರ್ಡ್ ಗಳ ನವೀಕರಣಕ್ಕಾಗಿ (Renewal) ಸೂಚನೆಯನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಕಾರ್ಮಿಕರ ಕಾರ್ಡ್ ಹೊಂದಿರುವ ಫಲಾನುಭವಿಗಳು ತಮ್ಮ ಕಾರ್ಡನ್ನು ಹೇಗೆ ಆನ್ಲೈನ್ ಮೂಲಕ ನವೀಕರಿಸಬಹುದು ಅದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದ್ದು ಸಂಪೂರ್ಣ ಮಾಹಿತಿಯನ್ನು ಗಮನವಿಟ್ಟು ಓದಿರಿ.

Labour Card Renewal 2024 Online
Labour Card Renewal 2024 Online

How to Labour card Renewal Online 2024

ಕರ್ನಾಟಕದಲ್ಲಿ ಆನ್‌ಲೈನ್‌ನಲ್ಲಿ ಲೇಬರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

  • ಅಧಿಕೃತ ವೆಬ್‌ಸೈಟ್‌ಗೆ https://kbocwwb.karnataka.gov.in/ ಭೇಟಿ ನೀಡಿ.
  • ಮುಂದೆ Login ಆಗಿ ಅಥವಾ Register ಆಗಿ.
  • ನಂತರ ಪರದೆ ಮೇಲೆ ಆನ್‌ಲೈನ್ ನೊಂದಣಿ ಮತ್ತು ನವೀಕರಣ(Renewal) ಕಾಣಿಸಿಕೊಳ್ಳುತ್ತದೆ ಅಲ್ಲಿ ನವೀಕರಣ ಟ್ಯಾಬ್ ಆಯ್ಕೆ ಮಾಡಿ.
Labour Card Renewal Kbocwwb Online
Labour Card Renewal
  • ಪರದೆಯ ಮೇಲೆ ಲೇಬರ್ ಕಾರ್ಡ್ ನೊಂದಣಿ ಸಂಖ್ಯೆ ಮತ್ತು ರೆಫರೆನ್ಸ್ ಸಂಖ್ಯೆಯನ್ನು ಕೇಳಲಾಗುತ್ತಿದೆ ಅದನ್ನು ನಮೂದಿಸಿ.
  • ನಂತರ ನಿಮ್ಮ ನೋಂದಣಿಯ ಮೊಬೈಲ್ ನಂಬರ್ ಅನ್ನು ಭರ್ತಿ ಮಾಡಿ ಸಲ್ಲಿಸು ಕ್ಲಿಕ್ ಮಾಡಿ.
  • ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ.
  • ಆಧಾರ್ ವೇರಿಫೈ ಆದ ನಂತರ ಅಲ್ಲಿ ಕೇಳಲಾಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ನಿಮ್ಮ ಹಳೆಯ ಲೇಬರ್ ಕಾರ್ಡನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಇವುಗಳ ಜೊತೆಗೆ 90 ದಿನಗಳು ಕೆಲಸ ಮಾಡಿರುವ ಪ್ರಮಾಣ ಪತ್ರ, ವೇತನ ಪತ್ರ (salary slip), ಘೋಷಣೆ ಪತ್ರ( ಈ ದಾಖಲಾತಿಯು ವೆಬ್ ಸೈಟ್ ನಲ್ಲಿ ನೀಡಲಾಗಿದ್ದು ಅದನ್ನು ಪ್ರಿಂಟ್ ತೆಗೆದುಕೊಂಡು) ಭರ್ತಿ ಮಾಡಿ ಸೆಂಡ್ ಮಾಡಿ ಅಪ್ಲೋಡ್ ಮಾಡಿ.
  • ಕೊನೆಯದಾಗಿ ಸಲ್ಲಿಸು ಕ್ಲಿಕ್ ಮಾಡಿ ನಿಮಗೆ ” Acknowledgement” ಪರದೆಯ ಮೇಲೆ ಬರುತ್ತದೆ ಅದನ್ನು ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ.

ಈ ಅರ್ಜಿ ಸ್ಥಿತಿಯು ಒಟ್ಟು 90 ದಿನಗಳ ಕಾಲ ಕಾರ್ಯಗತವಾಗಿದ್ದು, ಈ ದಿನಗಳ ಳಗಾಗಿ ನಿಮ್ಮ ಕಾರ್ಮಿಕ ಕಾರ್ಡ್ ನವೀಕರಣಗೊಂಡಿರುತ್ತದೆ.

Also Read: ಹೊಸ ಲೇಬರ್ ಕಾರ್ಡ್: Karnataka Labour Card Online Application Form 2024, Apply

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

Official Websitekbocwwb.karnataka.gov.in
More UpdatesKarnatakaHelp.in

Leave a Comment