ಭಾರತೀಯ ಜೀವ ವಿಮಾ ನಿಗಮ (LIC) ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭಿಸಿದೆ.
ವಿವಿಧ ಕಚೇರಿಗಳಲ್ಲಿ ಒಟ್ಟು 192 ಅಭ್ಯರ್ಥಿಗಳನ್ನು 12 ತಿಂಗಳುಗಳ ಅವಧಿಯವರೆಗೆ ನೇಮಕಾತಿ ಮಾಡಿಕೊಂಡು ಅಪ್ರೆಂಟಿಸ್ಶಿಪ್ ತರಬೇತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NATS ಅಧಿಕೃತ ಜಾಲತಾಣ https://nats.education.gov.in/ ಕ್ಕೆ ಭೇಟಿ ನೀಡಿ. ಸೆಪ್ಟೆಂಬರ್ 22ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಎಲ್ಐಸಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು. (01-ಸೆಪ್ಟೆಂಬರ್-2021 ಕ್ಕಿಂತ ಮೊದಲು ಪೂರ್ಣಗೊಳಿಸಿರಬಾರದು)
ವಯೋಮಿತಿ:
01-09-2025 ರಂತೆ;
ಕನಿಷ್ಠ ಮಿತಿ – 20 ವರ್ಷಗಳು
ಗರಿಷ್ಠ ಮಿತಿ – 25 ವರ್ಷಗಳು
ಆಯ್ಕೆ ವಿಧಾನ:
ಪ್ರವೇಶ ಪರೀಕ್ಷೆ
ದಾಖಲೆ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಶಿಷ್ಯವೇತನ/ತರಬೇತಿ ಭತ್ಯೆ:
ಅಭ್ಯರ್ಥಿಗಳಿಗೆ ಮಾಸಿಕ 12,000 ರೂ. ವರೆಗೆ ಶಿಷ್ಯವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ – 944ರೂ.
ಪ.ಜಾತಿ, ಪ.ಪಂಗಡ, ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – 708ರೂ.
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 472ರೂ.
How to Apply for LIC HFL Apprentice Recruitment 2025
ಅರ್ಜಿ ಸಲ್ಲಿಸುವ ವಿಧಾನ;
NATS ಅಧಿಕೃತ ಜಾಲತಾಣ https://nats.education.gov.in/ ಕ್ಕೆ ಭೇಟಿ ನೀಡಿ.
ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
ಲಾಗಿನ್ ಆದ ನಂತರ “LICHFL” ನ ಅಪ್ರೆಂಟಿಸ್ಶಿಪ್ ಜಾಹೀರಾತನ್ನು ವೀಕ್ಷಿಸಿ ಅನ್ವಯಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಭವಿಷ್ಯದ ಎಲ್ಲಾ ಪತ್ರವ್ಯವಹಾರಗಳಿಗಾಗಿ ತಮ್ಮ ದಾಖಲಾತಿ ಐಡಿಯನ್ನು NATS ಪೋರ್ಟಲ್ನಿಂದ ನೀಡಲಾಗುತ್ತದೆ.
NATS ನಲ್ಲಿ ಅಪ್ರೆಂಟಿಸ್ಶಿಪ್ ಅವಕಾಶ/ಜಾಹೀರಾತಿಗಾಗಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು BFSI SSC (info@bfsissc.com) ನಿಂದ ಇಮೇಲ್ ಅನ್ನು ಸ್ವೀಕರಿಸುತ್ತಾರೆ.
ಅವರ ತರಬೇತಿಗಾಗಿ ಜಿಲ್ಲೆಗಳ ಆಯ್ಕೆ ಇತ್ಯಾದಿಗಳ ಬಗ್ಗೆ ಅಗತ್ಯ ವಿವರಗಳನ್ನು ನೀಡಲು ಮತ್ತು ಅರ್ಜಿ ಶುಲ್ಕವನ್ನು ಪಾವತಿಸಲು ಆಹ್ವಾನಿಸಲಾಗುತ್ತದೆ.
ನಂತರ ಅಭ್ಯರ್ಥಿಗಳು ಜಿಲ್ಲೆಗಳನ್ನು ಆಯ್ಕೆ ಮಾಡಿ. ಅರ್ಜಿ ಶುಲ್ಕ ಪಾವತಿ ಮಾಡಬಹುದು.