ಮುಳಬಾಗಿಲು ಮಹಿಳಾ ರೈತ ಉತ್ಪಾದಕರ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮುಳಬಾಗಿಲು ತಾಲೂಕಿನ ಎನ್.ಅರ್.ಎಲ್.ಎಮ್ ಯೋಜನೆಯ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಗಿರುವ ಮುಳಬಾಗಿಲು ಮಹಿಳಾ ರೈತ ಉತ್ಪಾದಕರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಲೆಕ್ಕಗರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ನೇಮಕಾತಿಯಲ್ಲಿ ಒಟ್ಟು 2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಬಯೋಡಾಟವನ್ನು (Resume) ಭಾವಚಿತ್ರ ಮತ್ತು ಅಗತ್ಯ ದಾಖಲೆಗಳೊಂದಿಗೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಮುಳಬಾಗಿಲು ತಾಲೂಕು ಅಭಿಯಾನ ನಿರ್ವಾಹನ ಘಟಕಕ್ಕೆ ಆಗಸ್ಟ್ 20ರ ಒಳಗೆ ಸಲ್ಲಿಸಬೇಕು. ಖುದ್ದಾಗಿ ಕಚೇರಿಗೆ ಬಂದು ನೀಡುವ ಅರ್ಜಿಗಳನ್ನು ವಿಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಲೇಖನದಲ್ಲಿ Mahila Kisan Producer Company Limited Vacancy 2024 ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಈಗಾಗಲೇ ಪ್ರಾರಂಭವಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 20, 2024 (ಸಂಜೆ 5:30).
ವಿದ್ಯಾರ್ಹತೆ:
- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಹುದ್ದೆಗಳಿಗೆ – ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೃಷಿ ಮಾರ್ಕೆಟಿಂಗ್/ ಅಗ್ರಿ ಬಿಜಿನೆಸ್ ಮ್ಯಾನೇಜ್ಮೆಂಟ್/ ಎಂಬಿಎ ಪದವಿ ಪಡೆದುಕೊಂಡಿರಬೇಕು.
- ಕನಿಷ್ಠ ಎರಡು ವರ್ಷಗಳ ಮಾರುಕಟ್ಟೆ ನಿರ್ವಹಣೆ ಅಥವಾ ಸಂಬಂಧಿಸಿದ ಕೆಲಸದಲ್ಲಿ ಅರ್ಹತೆ ಇರಬೇಕು.
- ವ್ಯಾಪಾರ ಮತ್ತು ಲೆಕ್ಕಾಚಾರ ಪರಿಜ್ಞಾನ ಮಾತುಗಾರಿಕೆ ಸಮೂಹನ ಕಲೆ ನಾಯಕತ್ವದ ಗುಣ ಹಾಗೂ ಅತ್ಯುತ್ತಮ ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು.
- ಲೆಕ್ಕಿಗರು(Accountant) ಹುದ್ದೆಗಳಿಗೆ – ಬಿ.ಕಾಮ್/ ಎಂ.ಕಾಮ್/ ಬಿಬಿಎ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
- ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18ರಿಂದ ಗರಿಷ್ಠ 35 ವರ್ಷಗಳ ಒಳಗಿರಬೇಕು.
ವೇತನ ವಿವರ:
- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ – ₹25,000
- ಲೆಕ್ಕಿಗರು(Account) ಹುದ್ದೆಗೆ – ₹10,000
How to Apply for Mahila Kisan Producer Company Limited Vacancy 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಬಯೋ-ಡೇಟಾ ಜೊತೆಗೆ ಭಾವಚಿತ್ರ ಮತ್ತು ಸೂಕ್ತ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣದೊಂದಿಗೆ ಕಡ್ಡಾಯವಾಗಿ ಪೋಸ್ಟ್ ಅಥವಾ ಕೊರಿಯರ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ತಾಲೂಕು ಅಭಿಯಾನ ನಿರ್ವಹಣೆ ಘಟಕ, ಎನ್ ಆರ್ ಎಲ್ ಎಂ ಶಾಖೆ, ತಾಲೂಕು ಪಂಚಾಯಿತಿ, ಮುಳುಬಾಗಿಲು.
ಹೆಚ್ಚಿನ ಮಾಹಿತಿಗಾಗಿ:
ದೂರವಾಣಿ ಸಂಖ್ಯೆ – 8277399989 ಅಥವಾ 9741676895ಕ್ಕೆ ಸಂಪರ್ಕಿಸಬಹುದು.
Important Direct Links:
Official Notification PDF | Download |
More Updates | Karnataka Help.in |