ದೇಶದ ಅತಿದೊಡ್ಡ ಮ್ಯಾಂಗನೀಸ್ ಅದಿರು ಉತ್ಪಾದಕ ಸಂಸ್ಥೆಯಾಗಿರುವ ಮ್ಯಾಂಗನೀಸ್ ಓರ್ ಇಂಡಿಯಾ ಲಿಮಿಟೆಡ್ (MOIL) ಗ್ರಾಜುಯೇಟ್ ಟ್ರೈನಿ, ಮ್ಯಾನೇಜ್ಮೆಂಟ್ ಟ್ರೈನಿ ಹಾಗೂ ಮ್ಯಾನೇಜರ್(ಸಮೀಕ್ಷೆ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ವಿವಿಧ ವಿಭಾಗಗಳಿಗೆ ಗ್ರಾಜುಯೇಟ್ ಟ್ರೈನಿ(49), ಮ್ಯಾನೇಜ್ಮೆಂಟ್ ಟ್ರೈನಿ(15) ಹಾಗೂ ಮ್ಯಾನೇಜರ್(03) ಸೇರಿದಂತೆ ಒಟ್ಟು 67 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಿದೆ. ಸಂಬಂಧಿತ ವಿಷಯದಲ್ಲಿ ಬಿ.ಇ/ಬಿ.ಟೆಕ್/ಎಂ.ಟೆಕ್/ಡಿಪ್ಲೋಮಾ/ಪದವೀಧರರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಜ.20ರೊಳಗೆ ಅರ್ಜಿ ಸಲ್ಲಿಸಲು IBPS ಅಧಿಕೃತ ಜಾಲತಾಣದ ಲಿಂಕ್ https://ibpsreg.ibps.in/moildec25/ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 31, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 20, 2026
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜನವರಿ 20, 2026
ಶೈಕ್ಷಣಿಕ ಅರ್ಹತೆ:
✓ ಗ್ರಾಜುಯೇಟ್ ಟ್ರೈನಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್/ಎಂ.ಟೆಕ್/ಪದವಿ ಪೂರ್ಣಗೊಳಿಸಿರಬೇಕು.
✓ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್, ಎಂಬಿಎ/ಸ್ನಾತಕೋತ್ತರ ಡಿಪ್ಲೊಮಾ, ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿರಬೇಕು.
✓ ಮ್ಯಾನೇಜರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಗ್ರಾಜುಯೇಟ್ ಟ್ರೈನಿ ಹಾಗೂ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು ಮ್ಯಾನೇಜರ್ ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು
ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ(CBT) ಸಂದರ್ಶನ ದಾಖಲೆ ಪರಿಶೀಲನೆ
ಸಂಬಳ:
💸ಗ್ರಾಜುಯೇಟ್ ಟ್ರೈನಿ ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ವೇತನ ಶ್ರೇಣಿ ₹40,000 ರಿಂದ 1,40,000/- [1 ವರ್ಷದ ತರಬೇತಿ ನಂತರ ₹50,000 – 1,60,000] 💸ಮ್ಯಾನೇಜರ್ ಹುದ್ದೆಗೆ ವೇತನ ಶ್ರೇಣಿ ₹50,000 ರಿಂದ 1,60,000/-
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – ₹590 ಪ.ಜಾತಿ, ಪ.ಪಂಗಡ ಹಾಗೂ MOIL ಲಿಮಿಟೆಡ್ನ ಉದ್ಯೋಗಿಗಳಿಗೆ – ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ..?
• ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು IBPS ಅಧಿಕೃತ ಜಾಲತಾಣ https://ibpsreg.ibps.in/moildec25/ಕ್ಕೆ ಭೇಟಿ ನೀಡಿ.
• ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.̳̳̳