Mysore District Court Government Lawyer Recruitment 2025 Notification
ಮೈಸೂರು ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ಗರಿಷ್ಠ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಸದರಿ ಹುದ್ದೆಗೆ ಹೊಸ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಆಫ್ಲೈನ್ ಮೂಲಕ ಅಕ್ಟೋಬರ್ 8 ರೊಳಗೆ ಅರ್ಜಿ ಸಲ್ಲಿಸಿ, ಅವಧಿ ಮೀರಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಸೆಪ್ಟೆಂಬರ್ 08 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 08, 2025
ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಅರ್ಹತೆಗಳು:
ಅಭ್ಯರ್ಥಿಗಳು ವಕೀಲ ವೃತ್ತಿಯಲ್ಲಿ ರಾಜ್ಯ ಬಾರ್ ಕೌನ್ಸಿಲ್ ನೊಂದಣಿ ಮತ್ತು 10 ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ವೃತ್ತಿ ಅನುಭವವನ್ನು ಹೊಂದಿರಬೇಕು ಹಾಗೂ ವೃತ್ತಿ ಅನುಭವದ ಬಗ್ಗೆ ಸ್ಥಳೀಯ ವಕೀಲರ ಸಂಘದ ದೃಡೀಕರಣ ಪತ್ರ ಹೊಂದಿರಬೇಕು.
• ಅಭ್ಯರ್ಥಿಗಳು ಕರ್ನಾಟಕ ಕಾನೂನು ಅಧಿಕಾರಿಗಳ ನೇಮಕಾತಿ ಮತ್ತು ಸೇವಾ ಷರತ್ತು ನಿಯಮಾವಳಿ 1977 ನಿಯಮ 26(2)ರಲ್ಲಿ ತಿಳಿಸಿರುವ ಅಗತ್ಯ ಷರತ್ತುಗಳನ್ನು ಪೂರೈಸಿರಬೇಕು.
ವಯೋಮಿತಿ:
ಉಲ್ಲೇಖಿಸಲಾಗಿರುವುದಿಲ್ಲ
ಸಂಬಳ:
ಸರ್ಕಾರದ ನಿಯಮಾನುಸಾರ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ ಜಾತಿ ಮತ್ತು ವಕೀಲ ವೃತ್ತಿಯಲ್ಲಿನ ಅನುಭವ. ಇತ್ಯಾದಿ ವಿವರಗಳನ್ನು ನಮೂದಿಸಿದ ಸ್ವಯಂ ವಿವರಣೆಯ (ಬಯೋಡೆಟಾ) ಮಾಹಿತಿ ಇತರೆ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 08 ರೊಳಗೆ ಕಛೇರಿ ವೇಳೆಯಲ್ಲಿ (ಬೆಳಿಗ್ಗೆ 10 ರಿಂದ ಸಂಜೆ 5-30 ಗಂಟೆಯೊಳಗೆ) ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ: ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾಧಿಕಾರಿ ಕಚೇರಿ, ಗಿರಿಭೋವಿ ಪಾಳ್ಯ, ಸಿದ್ಧಾರ್ಥನಗರ, ಮೈಸೂರು – 570011
Shivanand dashyal
I m form vrushabendra TC
Job