ಮುಂಬೈನ ನೌಕಾಪಡೆ ಡಾಕ್ಯಾರ್ಡ್ ಅಪ್ರೆಂಟಿಸ್ ಶಾಲೆಯಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ವಿವಿಧ ಗೊತ್ತುಪಡಿಸಿದ ಟ್ರೇಡ್ಗಳಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಪ್ರಸ್ತುತ ಖಾಲಿ ಇರುವ ಅಡ್ವಾನ್ಸ್ಡ್ ಮೆಕ್ಯಾನಿಕ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಷಿನಿಸ್ಟ್ ಸೇರಿದಂತೆ ಇತರೆ ಒಟ್ಟು 286 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಬಯಸುವ ಆಸಕ್ತ ಮತ್ತು ಅರ್ಹ ಪುರುಷ/ ಮಹಿಳಾ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ https://applicationportal.in/ ಜಾಲತಾಣಕ್ಕೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – ಆಗಸ್ಟ್ 25, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 12, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 50% ಅಂಕಗಳೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ವ್ಯಾಪಾರದಲ್ಲಿ ಐಟಿಐ, ಎನ್ಸಿವಿಟಿ ಪ್ರಮಾಣಪತ್ರವನ್ನು ಹೊಂದಿರಬೇಕು.
ITI ಟ್ರೇಡ್ಸ್ – ಸಂಬಂಧಿತ ಟ್ರೇಡ್ನಲ್ಲಿ ITI (NCVT/SCVT) ಪಾಸ್.
ITI ಅಲ್ಲದ ಟ್ರೇಡ್{(ಕ್ರೇನ್ ಆಪರೇಟರ್ (OSI)} – 10ನೇ ತರಗತಿ ಪಾಸ್.
ITI ಅಲ್ಲದ ಟ್ರೇಡ್ (ರಿಗ್ಗರ್) – 8ನೇ ತರಗತಿ ಪಾಸ್.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 14 ವರ್ಷಗಳು(non-hazardous occupations)
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು(hazardous occupations)
ಆಯ್ಕೆ ವಿಧಾನ:
ಪ್ರಾಥಮಿಕ ಅರ್ಹತಾ ಪಟ್ಟಿ
ಲಿಖಿತ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ದಾಖಲೆಗಳ ಪರಿಶೀಲನೆ
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
How to Apply for Naval Dockyard Mumbai Apprentice Recruitment 2025
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
ಅಧಿಕೃತ ಜಾಲತಾಣ https://applicationportal.in/ಕ್ಕೆ ಭೇಟಿ ನೀಡಿ.
ನೌಕಾ ಡಾಕ್ಯಾರ್ಡ್ನಲ್ಲಿ ಕೌಶಲ್ಯಪೂರ್ಣ ಟ್ರೇಡ್ಸ್ಮನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ -2025 – ಅರ್ಜಿ ನಮೂನೆ ಆಯ್ಕೆ ಮಾಡಿ.
ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ ಸಹಿ ಭಾವಚಿತ್ರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ. ಭವಿಷ್ಯದ ಬಳಕೆಗಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
1 thought on “ನೌಕಾಪಡೆ ಡಾಕ್ಯಾರ್ಡ್ನಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ”
My brother recommended I might like this web site He was totally right This post actually made my day You cannt imagine just how much time I had spent for this information Thanks
My brother recommended I might like this web site He was totally right This post actually made my day You cannt imagine just how much time I had spent for this information Thanks