Navodaya Vidyalaya Admission 2025-26 Online Application Form
ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ, ನವೋದಯ ವಿದ್ಯಾಲಯ ಸಮಿತಿಯು ಅರ್ಜಿಯನ್ನು ಆಹ್ವಾನಿಸಲಾಗಿದೆ.
ದೇಶದಾದ್ಯಂತ ಉತ್ತಮ ಮಟ್ಟದ ಶಿಕ್ಷಣ ನೀಡುತ್ತಿರುವ ನವೋದಯ ವಿದ್ಯಾಲಯ 6ನೇ ತರಗತಿಗಳ ಪ್ರವೇಶಾತಿ ಪ್ರಕ್ರಿಯಗೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿದ್ಯಾಲಯ ಸಮಿತಿಯ ವತಿಯಿಂದ ಊಟ, ವಸತಿ, ಶಿಕ್ಷಣವನ್ನು 12th ತರಗತಿಯವರೆಗೂ ಉಚಿತವಾಗಿ ನೀಡಲಾಗುತ್ತದೆ. ನವೋದಯ ಶಾಲೆಗಳು ದೇಶದ ವಿವಿಧ ಕಡೆ ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು ತಮಗೆ ಹತ್ತಿರವಿರುವ ಅಥವಾ ಸ್ವಂತ ಜಿಲ್ಲೆಯ ವಿದ್ಯಾಲಯಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅಧಿಸೂಚನೆಯ ಪ್ರಕಾರ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯು ದಿನಾಂಕ 30-05-2025 ರಿಂದ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 29, 2025 ಕೊನೆಯ ದಿನವಾಗಿದೆ. ಈ ಬಾರಿ ನವೋದಯ ಅರ್ಹತಾ ಪರೀಕ್ಷೆ(Navodaya Vidyalaya Admission 2025-26)ಯು ಎರಡು ಹಂತಗಳಲ್ಲಿ ದೇಶದಾದ್ಯಂತ ನಡೆಯಲಿದ್ದು ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡ ವಿದ್ಯಾರ್ಥಿಗಳನ್ನು 6ನೇ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನವೋದಯ ವಿದ್ಯಾಲಯ ಅಧಿಕೃತ ವೆಬ್ ಸೈಟ್ https://navodaya.gov.in ಭೇಟಿ ನೀಡಬೇಕು. ಈ ಲೇಖನದಲ್ಲಿ ನಾವು ನವೋದಯ ವಿದ್ಯಾಲಯ ಪ್ರವೇಶ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Important Date of Navodaya Vidyalaya Admission 2025-26
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – 30-05-2025
ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 13-08-2025
ಅರ್ಹತಾ ಪರೀಕ್ಷಾ ನಡೆಯುವ ದಿನಾಂಕ – ಡಿಸೆಂಬರ್ 13, 2025 ಮತ್ತು ಏಪ್ರಿಲ್ 11, 2026 ಎರಡು ಹಂತಗಳಲ್ಲಿ ನಡೆಯಲಿದೆ.
Eligibility Criteria Of Navodaya Vidyalaya Admission 2025 Online Application Form
ಅರ್ಹತೆ:
6 ನೇ ತರಗತಿ: ಅರ್ಜಿದಾರರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ವಯೋಮಿತಿಯು 10 ರಿಂದ 12 ವರ್ಷಗಳ ನಡುವೆ ಇರಬೇಕು.
Jawaharlal Navodaya Vidyalaya Selection Test 2025
ಪರೀಕ್ಷಾ ವಿಧಾನ: ಒಟ್ಟು 100 ಅಂಕಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯು ಮೂರು ವಿಭಾಗಗಳಿಂದ 80 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಸ್ತುನಿಷ್ಠ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯನ್ನು ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಮತ್ತು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು. ಮತ್ತು ಪರೀಕ್ಷೆಯ ಅವಧಿಯು 2 ಗಂಟೆಗಳಿರುತ್ತದೆ. ನಕಾರಾತ್ಮಕ ಅಂಕಗಳಿರುವುದಿಲ್ಲ.
Documents Required for Navodaya Vidyalaya Admission 2025-26 Application
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು;
ಶಾಲೆಯ ಮುಖ್ಯ ಶಿಕ್ಷಕರಿಂದ ಪಡೆದ ಸ್ಟಡಿ ಸರ್ಟಿಫಿಕೇಟ್.
ವಿದ್ಯಾರ್ಥಿಯ ಭಾವಚಿತ್ರ.
ಪೋಷಕರ ಸಹಿ.
ವಿದ್ಯಾರ್ಥಿಯ ಸಹಿ.
ಆಧಾರ್ ಕಾರ್ಡ್.
ವಸತಿ ಪ್ರಮಾಣ ಪತ್ರ.
ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ.
ಅರ್ಜಿ ಸಲ್ಲಿಕೆಗೆ ಮುನ್ನ ಈ ಮೇಲಿನ ದಾಖಲೆಗಳೂ ಸಾಫ್ಟ್ ಕಾಪಿಯಲ್ಲಿ ‘JPG’ ರೂಪದಲ್ಲಿ 10 ರಿಂದ 100 ಕೆಬಿ ಗಾತ್ರದಲ್ಲಿ ಅಪ್ಲೋಡ್ ಮಾಡಬೇಕು
Step by Step Process of Registration for Class VI JNVST (2025-26)
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮೂಲ ವಿವರಗಳನ್ನು ನಮೂದಿಸಿ: ವಿದ್ಯಾರ್ಥಿಯು ಪ್ರಸ್ತುತ 5 ನೇ ತರಗತಿಯಲ್ಲಿ ಓದುತ್ತಿದ್ದಾನೆಯೇ, ಅವರು ಮೊದಲು ಅರ್ಜಿ ಸಲ್ಲಿಸಿದ್ದಾರೆಯೇ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ಮೂಲ ವಿವರಗಳನ್ನು ಭರ್ತಿ ಮಾಡಿ.
ನೋಂದಾಯಿಸಿದ ನಂತರ, ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಒದಗಿಸಿದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಖಚಿತಪಡಿಸಿಕೊಳ್ಳಿ.
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಪರಿಶೀಲಿಸಿ, ನಿಮ್ಮ ದಾಖಲೆಗಳಿಗಾಗಿ ನಕಲನ್ನು ಉಳಿಸಿ ಮತ್ತು ನಂತರ ಅರ್ಜಿಯನ್ನು ಸಲ್ಲಿಸಿ.
ಸಲ್ಲಿಕೆಯ ನಂತರ, ಭವಿಷ್ಯದ ಉಲ್ಲೇಖ ಮತ್ತು ಪತ್ರ ವ್ಯವಹಾರಕ್ಕಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
Important Direct Links:
Navodaya Vidyalaya Admission 2025-26 Prospectus (Notification) PDF