ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷೆಗಳ ಮಂಡಳಿಯು NEET PG 2024 ರ ಪರೀಕ್ಷೆಯನ್ನು ಇದೇ ಜೂನ್ 23ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹಗರಣ ಹೊರ ಬರುತ್ತಿದ್ದಂತೆ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿತ್ತು. ಪರೀಕ್ಷಾ ಮಂಡಳಿಯೂ ಇದೀಗ ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಅಧಿಕೃತವಾಗಿ ಪ್ರಕಟ ಮಾಡಿದೆ.
NEET PG 2024 ಪರೀಕ್ಷೆಯು ಈಗ ಆಗಸ್ಟ್ 11, 2024 ರಂದು ಎರಡು ಶಿಫ್ಟ್‌ಗಳಲ್ಲಿ ನಡೆಯಲಿದೆ. ದೇಶಾದ್ಯಂತ ಸುಮಾರು 52,000 ಸ್ನಾತಕೋತ್ತರ ಸೀಟುಗಳಿಗೆ ಪ್ರತಿ ವರ್ಷ ಸುಮಾರು ಎರಡು ಲಕ್ಷ ಎಂಬಿಬಿಎಸ್ ಪದವೀಧರರು ನೀಟ್ ಪಿಜಿ ಪರೀಕ್ಷೆಯನ್ನು ಬರೆಯಲಿದ್ದಾರೆ.\