NEET UG Admit Card 2024: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ NEET UG 2024ರ ಪರೀಕ್ಷೆಗೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು NEET 2024 ರ ಪ್ರವೇಶ ಪತ್ರವನ್ನು ಅನ್ ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಅಥವಾ ಭದ್ರತಾ ಪಿನ್ ನಮೂದಿಸಿವ ಮೂಲಕ ಪಡೆದುಕೊಳ್ಳಬಹುದಗಿದೆ.
NEET 2024 ಪ್ರವೇಶ ಕಾರ್ಡ್ ಅನ್ನು ಬಿಡುಗಡೆ ಮಾಡುವ ಮೊದಲು ಅಧಿಕಾರಿಗಳು NEET 2024 ರ ಪರೀಕ್ಷೆ ಕೇಂದ್ರಗಳ ನಗರಗಳ ವಿವಿರಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಪ್ರವೇಶ ಪತ್ರದಲ್ಲಿ ಪರೀಕ್ಷೆ ಕೇಂದ್ರಗಳ ಮಾಹಿತಿ ಮತ್ತು ವಿಷಯ, ಸಮಯ, ಪರೀಕ್ಷಾ ದಿನಾಂಕಗಳ ಬಗ್ಗೆ ಮಾಹಿತಿ ಇರಲಿದೆ. ಭಾರತದಲ್ಲಿನ ಪದವಿಪೂರ್ವ ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ NTA ಪರೀಕ್ಷೆಯನ್ನು ಮೇ 5, 2024 ರಂದು ನಡೆಸುತ್ತದೆ. ಇ ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 5:20 ರವರೆಗೆ ನಡೆಯಲಿದ್ದು ಫಲಿತಾಂಶಗಳನ್ನು ಜೂನ್ 14, 2024 ರಂದು ಘೋಷಿಸಲಾಗುವುದು. NTA NEET UG ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದ್ದು, ಗಮನವಿಟ್ಟು ಓದಿರಿ.
How to Download NTA NEET UG Admit Card 2024
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- NTA NEET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://nta.ac.in/
- “NEET UG 2024 ಅಡ್ಮಿಟ್ ಕಾರ್ಡ್ ಡೌನ್‌ಲೋಡ್” ಲಿಂಕ್ ಕ್ಲಿಕ್ ಮಾಡಿ
- ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
- “ಸಲ್ಲಿಸು” ಕ್ಲಿಕ್ ಮಾಡಿ
- ನಿಮ್ಮ ಅಡ್ಮಿಟ್ ಕಾರ್ಡ್ ಪರದೆಯ ಮೇಲೆ ಪ್ರದರ್ಶನಗೊಳ್ಳುತ್ತದೆ
- ಅಡ್ಮಿಟ್ ಕಾರ್ಡ್‌ನ ಪ್ರತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಮುದ್ರಿಸಿ
ಅಡ್ಮಿಟ್ ಕಾರ್ಡ್‌ನಲ್ಲಿ ಈ ಕೆಳಗಿನ ಮಾಹಿತಿ ಇರುತ್ತದೆ:
- ಅಭ್ಯರ್ಥಿಯ ಹೆಸರು
- ಪರೀಕ್ಷಾ ಕೇಂದ್ರದ ವಿವರಗಳು
- ಪರೀಕ್ಷಾ ಸಮಯ
- ರೋಲ್ ನಂಬರ್
- ಮುಖ್ಯ ಸೂಚನೆಗಳು
ಪರೀಕ್ಷಾ ದಿನದಂದು, ಅಭ್ಯರ್ಥಿಗಳು ಈ ಕೆಳಗಿನವುಗಳನ್ನು ತರಬೇಕು:
- ಅಡ್ಮಿಟ್ ಕಾರ್ಡ್
- ಒಂದು ಗುರುತಿನ ಚೀಟಿ (ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಇತ್ಯಾದಿ)
- ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು.
Important Links:
NEET UG Admit Card 2024 Notice | Download |
NEET UG Admit Card 2024 Download Link | Click Here |
Official Website | exams.nta.ac.in |
More Updates | KarnatakaHelp.in |