WhatsApp Channel Join Now
Telegram Group Join Now

NHM Haveri Recruitment 2024: ಹಾವೇರಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವಿವಿಧ ಉದ್ಯೋಗಾವಕಾಶಗಳು

ಹಾವೇರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹಾವೇರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರವಳಿಕೆ 4 ತಜ್ಞ ವೈದ್ಯರು ಹಾಗೂ 44 ಎಂಬಿಬಿಎಸ್ ವೈದ್ಯಾಧಿಕಾರಿಗಳ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳನ್ನು ನಿಗದಿಪಡಿಸಿದ ದಿನದಂದು ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Nhm Haveri Recruitment 2024
Nhm Haveri Recruitment 2024

ಅರ್ಜಿ ಪ್ರತಿಗಳನ್ನು ಪ್ರತಿದಿನ ಕಚೇರಿ ಅವಧಿಯಲ್ಲಿ ಹುದ್ದೆಗಳ ಭರ್ತಿಯಾಗುವವರೆಗೂ ನೀಡಲಾಗುತ್ತದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಕಚೇರಿಯನ್ನು ಸಂಪರ್ಕಿಸಿ ಅರ್ಜಿ ನಮೂನೆಗಳನ್ನು ಪಡೆದುಕೊಳ್ಳಬಹುದು‌. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲಿಸಿ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಾವೇರಿ ಜಿಲ್ಲಾ ಆರೋಗ್ಯ ಭವನದ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿಯನ್ನು ವಿತರಿಸಲಾಗುತ್ತಿದ್ದು, ಅರ್ಜಿಯನ್ನು ಪಡೆದು ಸೂಕ್ತ ದಾಖಲಾತಿಗಳ ಜೆರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರದ ಎರಡು ಪತಿಗಳನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸಬೇಕು. ಈ ಹುದ್ದೆಗಳಗೆ ಯಾವುದೇ ಕಾರಣಕ್ಕೂ ಆನ್ಲೈನ್ ಮೂಲಕ ಅಥವಾ ರಿಜಿಸ್ಟರ್ ಪೋಸ್ಟ್, ಇ-ಮೇಲ್ ಮೂಲಕ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ‌. ಈ ಲೇಖನದಲ್ಲಿ ಹಾವೇರಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ನೇಮಕಾತಿ(DHFWS NHM Haveri Recruitment 2024)ಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of DHFWS Haveri Notification 2024

Organization Name – District Health and Family Welfare Society, Haveri
Post Name – Various posts
Total Vacancy – 48
Application Process: Offline
Job Location – Haveri

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 03/08/2024
  • ನೇರ ಸಂದರ್ಶನದ ದಿನಾಂಕ – ಆಗಸ್ಟ್ 12ರಿಂದ 14 ವರೆಗೆ ನಡೆಯಲಿದೆ

(ಪ್ರತಿ ಹುದ್ದೆಗಳಗೆ ಪ್ರತ್ಯೇಕ ದಿನದಂದು ಸಂದರ್ಶನ ನಡೆಯಲಿದೆ)

ಖಾಲಿ ಇರುವ ಹುದ್ದೆಗಳ ವಿವರ:

  • ಕಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು: 13
  • ನೇತ್ರ ಸಹಾಯಕರು/ ಫಾರ್ಮಾಸಿಸ್ಟ್‌ : 2
  • ಆರ್‌ಬಿಎಸ್‌ಕೆ ಆಯುಷ್ ವೈದ್ಯರು: 2
  • ಇಂಜಿನಿಯರ್(Bio medical) : 1
  • ಆರೋಗ್ಯ ತಪಾಸಣಾ ಅಧಿಕಾರಿಗಳು (HIO) : 7
  • ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು (LHV) : 01
  • ಶುಶ್ರೂಷಾಧಿಕಾರಿಗಳು: 33
  • ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರು(DSO) : 01
  • ಮೈಕ್ರೋಬಯಾಲಾಜಿಸ್ಟ್‌: 1
  • ಫಿಜಿಶಿಯನ್: 2
  • ಎಪಿಡಮಿಯಾಲಜಿಸ್ಟ್‌: 4
  • ಅರೆಕಾಲಿಕ ಯೋಗ ತರಬೇತುದಾರರು: 56
  • ಡೆಂಟಲ್ ಹೈಜೆನಿಸ್ಟ್‌: 1
  • ಆಡಿಯೋಲಾಜಿಸ್ಟ್‌ : 1
  • ಇತರೆ ಹುದ್ದೆಗಳು: 4

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಿದ್ಯಾರ್ಹತೆಯು ಪ್ರತಿ ಹುದ್ದೆಗಳ ಅನುಸಾರ ನಿಗದಿಪಡಿಸಲಾಗಿದೆ.

ಮಾನ್ಯತಾ ಪಡೆದ ವಿಶ್ವವಿದ್ಯಾಲಯ ಮತ್ತು ಮಂಡಳಿಗಳಿಂದ ಎಂಬಿಬಿಎಸ್, ಜನರಲ್ ನರ್ಸಿಂಗ್ ಡಿಪ್ಲೋಮೋ, ಸಾಮಾನ್ಯ ಪದವಿ, MBA, BDS, BHMS,‌ ಪದವಿಗಳನ್ನು ಪಡೆದುಕೊಂಡಿರಬೇಕು.

(ವಿದ್ಯಾರ್ಹತೆಯ ಸಂಪೂರ್ಣ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಚೆಕ್ ಮಾಡಿ)

How to Apply for NHM Haveri Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆರೋಗ್ಯವನ್ನು ತಾಲೂಕು ಅಧಿಕಾರಿಗಳ ಕಚೇರಿ, ಆವರಣ ಹಾವೇರಿ. ಇಲ್ಲಿ ಅರ್ಜಿ ನಮೂನೆಗಳನ್ನು ಪಡೆದು ಸೂಕ್ತ ದಾಖಲೆಗಳೊಂದಿಗೆ ಸ್ವತಃ ಅಭ್ಯರ್ಥಿಗಳು ಹಾಜರಿದ್ದು ಕಚೇರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಕಚೇರಿ ವಿಳಾಸ;

ಆರೋಗ್ಯ ಭವನ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ, ಆವರಣ ಹಾವೇರಿ

ನೇರ ಸಂದರ್ಶನದ ವಿವರ;

ವಿಳಾಸ – ಆರೋಗ್ಯ ಭವನ, ತಾಲೂಕಾ
ಆರೋಗ್ಯಾಧಿಕಾರಿಗಳ ಕಚೇರಿ, ಆವರಣ ಹಾವೇರಿ

ಸಮಯ – ಬೆಳಗ್ಗೆ 10:00 ಯಿಂದ ಮಧ್ಯಾಹ್ನ 1:00 ವರೆಗೆ

ದಿನಾಂಕ – ಆಗಸ್ಟ್ 12 ರಿಂದ ಅಗಸ್ಟ್ 14ರ ವರೆಗೆ
(ಹುದ್ದೆಗಳ ಅನುಸಾರ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಚೆಕ್ ಮಾಡಿ)

ಹೆಚ್ಚಿನ ಮಾಹಿತಿಗಾಗಿ:

ಜಿಲ್ಲಾ ಯೋಜನಾ ನಿರ್ವಾಹಣಾ ಘಟಕ ಜಿಲ್ಲಾಡಳಿತ ಭವನ ದೇವಗಿರಿ, ಹಾವೇರಿ ಕಚೇರಿಗೆ ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆ‌ – 944984313ಕ್ಕೆ ಸಂಪರ್ಕಿಸಬಹುದು.

Important Direct Links:

Official Notification PDFDownload
Official Websitehaveri.nic.in
More UpdatesKarnatakaHelp.in

Leave a Comment