ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(NIMHANS)ಯಲ್ಲಿ ವಿವಿಧ ಅಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಾಧ್ಯಾಪಕರ, ಹೆಚ್ಚುವರಿ ಪ್ರಾಧ್ಯಾಪಕರ ಹಾಗೂ ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಒಟ್ಟು 23 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾಶ್ವತ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ನಿರ್ದೇಶಕರು, ನಿಮ್ಹಾನ್ಸ್, ಪಿ.ವಿ. ಸಂಖ್ಯೆ 2900, ಹೊಸೂರು ರಸ್ತೆ, ಬೆಂಗಳೂರು-560029 ವಿಳಾಸಕ್ಕೆ ಜ.31ರೊಳಗೆ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
• ನರಶಸ್ತ್ರಚಿಕಿತ್ಸಾ ಪ್ರಾಧ್ಯಾಪಕ- 01 ಹುದ್ದೆ • ನರಶಸ್ತ್ರಚಿಕಿತ್ಸೆಯ ಹೆಚ್ಚುವರಿ ಪ್ರಾಧ್ಯಾಪಕ- 01 ಹುದ್ದೆ • ನರಶಸ್ತ್ರಚಿಕಿತ್ಸೆಯ ಸಹಾಯಕ ಪ್ರಾಧ್ಯಾಪಕ – 01 ಹುದ್ದೆ • ನರವಿಜ್ಞಾನದ ಸಹಾಯಕ ಪ್ರಾಧ್ಯಾಪಕ – 05 ಹುದ್ದೆಗಳು • ನರರೋಗ ನಿವಾರಣ ಮತ್ತು ನರರೋಗ ಆರೈಕೆಯ ಸಹಾಯಕ ಪ್ರಾಧ್ಯಾಪಕ- 03 ಹುದ್ದೆಗಳು • ನ್ಯೂರೋಇಮೇಜಿಂಗ್ ಮತ್ತು ಇಂಟರ್ವೆನ್ಷನಲ್ ರೇಡಿಯಾಲಜಿಯ ಸಹಾಯಕ ಪ್ರಾಧ್ಯಾಪಕ – 02 ಹುದ್ದೆಗಳು • ಪರಮಾಣು ಔಷಧದ ಸಹಾಯಕ ಪ್ರಾಧ್ಯಾಪಕ – 01 ಹುದ್ದೆ • ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ – 01 ಹುದ್ದೆ • ಕ್ಲಿನಿಕಲ್ ಸೈಕಾಲಜಿಯ ಸಹಾಯಕ ಪ್ರಾಧ್ಯಾಪಕ – 03 ಹುದ್ದೆಗಳು • ನರಶರೀರವಿಜ್ಞಾನದ ಸಹಾಯಕ ಪ್ರಾಧ್ಯಾಪಕ – 01 ಹುದ್ದೆ • ಮನೋವೈದ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ – 04 ಹುದ್ದೆಗಳು
ಒಟ್ಟು – 23 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಎಂ.ಸಿ.ಎಚ್, ಡಿಎಂ, ಎಂಡಿ, ಎಂಎಸ್, ಎಂ.ಎ, ಎಂ.ಎಸ್.ಸಿ, ಎಂ.ಫಿಲ್, ಪಿಎಚ್ಡಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ವಿದ್ಯಾರ್ಹತೆ ವಿವರಗಳಿಗಾಗಿ ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು. ಈ ಸುದ್ದಿಯ ಕೊನೆಯಲ್ಲಿ ಶೈಕ್ಷಣಿಕ ಅರ್ಹತೆಯನ್ನೊಳಗೊಂಡ ಪಿಡಿಎಫ್ ನೀಡಲಾಗಿದೆ.
ವಯೋಮಿತಿ:
31-01-2026 ರಂತೆ;
ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು
ವಯೋಮಿತಿ ಸಡಿಲಿಕೆ; ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ, ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕ) ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ದಾಖಲೆ ಪರಿಶೀಲನೆ, ವೈಯಕ್ತಿಕ ಸಂದರ್ಶನ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 1,01,500ರೂ. ಗಳಿಂದ 2,09,200ರೂ. ವರೆಗೆ ಮಾಹೆಯಾನ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಎಬಿಸಿ ಅಭ್ಯರ್ಥಿಗಳಿಗೆ – 2360ರೂ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 1180ರೂ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಅಭ್ಯರ್ಥಿಗಳಿಗೆ – US $35
ಅರ್ಜಿ ಸಲ್ಲಿಸುವ ವಿಧಾನ…
• ಮೊದಲಿಗೆ ಅಭ್ಯರ್ಥಿಗಳು NIMHANS ಅಧಿಕೃತ ಜಾಲತಾಣ https://www.nimhans.ac.in/ ಕ್ಕೆ ಭೇಟಿ ನೀಡಿ.
• ಅರ್ಜಿ ಸಂಸ್ಕರಣಾ ಶುಲ್ಕವನ್ನು ಜಾಲತಾಣದಲ್ಲಿ ಲಭ್ಯವಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ “SB ಕಲೆಕ್ಟ್ ಪೇಮೆಂಟ್” ಲಿಂಕ್ ಮೂಲಕ ಪಾವತಿಸಿ.
• ಬಳಿಕ ನಿಮ್ಹಾನ್ಸ್ ನೇಮಕಾತಿ ಮತ್ತು ಅಧಿಸೂಚನೆಗಳು ಶೀರ್ಷಿಕೆಯ ಕೆಳಗೆ ನೀಡಲಾಗಿರುವ “ನಿಮ್ಹಾನ್ಸ್ನಲ್ಲಿ ವಿವಿಧ ಅಧ್ಯಾಪಕರ ಹುದ್ದೆಗಳಿಗೆ ಖಾಲಿ ಹುದ್ದೆಗಳ ಅಧಿಸೂಚನೆ, ದಿನಾಂಕ 30-12-2025” ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ, ಅರ್ಜಿ ಸಂಸ್ಕರಣಾ ಶುಲ್ಕ ಪಾವತಿಸಿದ ರಶೀದಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
ಈ ಕೆಳಗಿನ ವಿಳಾಸಕ್ಕೆ ಜನವರಿ 31ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ನಿರ್ದೇಶಕರು, ನಿಮ್ಹಾನ್ಸ್, ಪಿ.ವಿ. ಸಂಖ್ಯೆ 2900, ಹೊಸೂರು ರಸ್ತೆ, ಬೆಂಗಳೂರು-560029