ಛತ್ತೀಸ್‌ಗಢ್: ಬಚೇಲಿಯ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಬೈಲಾಡಿಲ ಕಬ್ಬಿಣದ ಅದಿರು ಗಣಿಯಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ವಾಕ್-ಇನ್ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ವೃಂದದ ಟ್ರೇಡ್ ಅಪ್ರೆಂಟಿಸ್, ಪದವೀಧರ ಅಪ್ರೆಂಟಿಸ್ ಹಾಗೂ ತಂತ್ರಜ್ಞ ಅಪ್ರೆಂಟಿಸ್‌ಗಳಿಗೆ 180 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಸದರಿ ಅಪ್ರೆಂಟಿಸ್ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಮತ್ತು ಆಸಕ್ತ ಅರ್ಜಿದಾರರು ಜೂನ್ 01 ರಿಂದ 11ರವರೆಗೆ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನಕ್ಕೆ ಹಾಜರಾಗುವ ಮೊದಲು ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳು https://www.apprenticeshipindia.gov.in/ನಲ್ಲಿ ಹಾಗೂ ಪದವೀಧರ, ತಂತ್ರಜ್ಞ ಅಪ್ರೆಂಟಿಸ್ ಅಭ್ಯರ್ಥಿಗಳು https://nats.education.gov.in/ನಲ್ಲಿ ನೋಂದಣಿಯಾಗಿರಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ನೇಮಕಾತಿ ಪ್ರಕಟಣೆಯ ದಿನಾಂಕ – ಮೇ 06, 2026
- ವಾಕ್-ಇನ್ ಸಂದರ್ಶನದ ದಿನಾಂಕ – ಜೂನ್ 01-11, 2026
ಹುದ್ದೆಗಳ ವಿವರ:
ಕೋಪಾ(COPA)-30 ಹುದ್ದೆಗಳು
ಮೆಕ್ಯಾನಿಕ್-25 ಹುದ್ದೆಗಳು
ಫಿಟ್ಟರ್-20 ಹುದ್ದೆಗಳು
ಎಲೆಕ್ಟ್ರಿಷಿಯನ್-30 ಹುದ್ದೆಗಳು
ವೆಲ್ಡರ್-20 ಹುದ್ದೆಗಳು
ಮೆಕ್ಯಾನಿಕ್-20 ಹುದ್ದೆಗಳು
ಮಷಿನಿಸ್ಟ್-05 ಹುದ್ದೆಗಳು
ಮೆಕ್ಯಾನಿಕಲ್ ಎಂಜಿನಿಯರಿಂಗ್-06 ಹುದ್ದೆಗಳು
ಎಲೆಕ್ಟ್ರಿಕಲ್ ಎಂಜಿನಿಯರಿಂಗ್-04 ಹುದ್ದೆಗಳು
ಮೈನಿಂಗ್ ಎಂಜಿನಿಯರಿಂಗ್-04 ಹುದ್ದೆಗಳು
ಸಿವಿಲ್ ಎಂಜಿನಿಯರಿಂಗ್-02
ಮೆಕ್ಯಾನಿಕಲ್ ಎಂಜಿನಿಯರಿಂಗ್(ತಂತ್ರಜ್ಞ)-05 ಹುದ್ದೆಗಳು
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (ತಂತ್ರಜ್ಞ)-03 ಹುದ್ದೆಗಳು
ಮೈನಿಂಗ್ ಎಂಜಿನಿಯರಿಂಗ್ (ತಂತ್ರಜ್ಞ)-02 ಹುದ್ದೆಗಳು
MOM (ತಂತ್ರಜ್ಞ)-04 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
NMDC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಐಟಿಐ/4 ವರ್ಷಗಳ ಎಂಜಿನಿಯರಿಂಗ್ ಪದವಿ/3 ವರ್ಷಗಳ ಡಿಪ್ಲೋಮಾ ಇನ್ ಎಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿರಬೇಕು.
ಟ್ರೇಡ್ ಅಪ್ರೆಂಟಿಸ್ – ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ.
ಪದವೀಧರ ಅಪ್ರೆಂಟಿಸ್ -ಸಂಬಂಧಿತ ವಿಷಯದಲ್ಲಿ 4 ವರ್ಷದ ಎಂಜಿನಿಯರಿಂಗ್ ಪದವಿ.
ತಂತ್ರಜ್ಞ ಅಪ್ರೆಂಟಿಸ್ – ಸಂಬಂಧಿತ ವಿಷಯದಲ್ಲಿ 3 ವರ್ಷದ ಎಂಜಿನಿಯರಿಂಗ್ ಪದವಿ.
ವಯೋಮಿತಿ:
ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ನಿಯಮಗಳ ಅನುಸಾರ
ಆಯ್ಕೆ ವಿಧಾನ:
- ಸಂದರ್ಶನ
- ದಾಖಲೆ ಪರಿಶೀಲನೆ
ವೇತನ:
ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಮಾನದಂಡಗಳ ಅನುಸಾರ
ವಾಕ್ ಇನ್ ಸಂದರ್ಶನಕ್ಕೆ ಕೊಂಡೊಯ್ಯಬೇಕಾದ ಅಗತ್ಯ ದಾಖಲಾತಿಗಳು:
• ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
• ರೆಸ್ಯೂಮ್
• ಆಧಾರ್ ಕಾರ್ಡ್
• ಜಾತಿ ಪ್ರಮಾಣಪತ್ರ
• ಶೈಕ್ಷಣಿಕ ದಾಖಲಾತಿಗಳು
• ಪ್ಯಾನ್ ಕಾರ್ಡ್
• ಮತದಾರರ ಗುರುತಿನ ಚೀಟಿ
• ಬ್ಯಾಂಕ್ ಪಾಸ್‌ಬುಕ್
ನೋಂದಣಿ ಮಾಡುವ ವಿಧಾನ ಹಾಗೂ ವಾಕ್-ಇನ್- ಸಂದರ್ಶನದ ದಿನಾಂಕ
• ಅಭ್ಯರ್ಥಿಗಳು ವಾಕ್-ಇನ್- ಸಂದರ್ಶನಕ್ಕೂ ಮೊದಲು ಈ ಕೆಳಗಿನ ವೆಬ್‌ಸೈಟ್ ಗಳಲ್ಲಿ ನೋಂದಾಯಿಸಿಕೊಳ್ಳಬೇಕು.
• ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://www.apprenticeshipindia.gov.in/ಗೆ ಭೇಟಿ ನೀಡಿ ನೋಂದಾಯಿಸಿ.
• ಪದವೀಧರ/ಡಿಪ್ಲೋಮಾ(ತಂತ್ರಜ್ಞ) ಅಪ್ರೆಂಟಿಸ್ ಅಭ್ಯರ್ಥಿಗಳು NATSಅಧಿಕೃತ ವೆಬ್ಸೈಟ್ – https://nats.education.gov.in/ನೋಂದಾಯಿಸಿ.
ಎಲ್ಲಾ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 01 ರಿಂದ 11ರವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ವಿಳಾಸ: ಬೈಲಾದಿಲಾ ಕಬ್ಬಿಣದ ಅದಿರು ಗಣಿ, ಬಚೇಲಿ ಸಂಕೀರ್ಣ. ತರಬೇತಿ, ಸುರಕ್ಷತೆ ಮತ್ತು ಪರಿಸರ ಇಲಾಖೆ ದಂತೇವಾಡ, ಬಚೇಲಿ-494553, ಛತ್ತೀಸ್‌ಗಢ
Important Direct Links:
| Official Notification PDF | Download |
| Trade Apprentice Online Application Form Link | Apply Now |
| Graduate and Technician Apprentice Online Application Form Link | Apply Now |
| Official Website | www.nmdc.co.in |
| More Updates | KarnatakaHelp.in |