ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ (DOS)ದಡಿ ಬರುವ ಬೆಂಗಳೂರಿನ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನಲ್ಲಿ ವಿವಿಧ ಸಲಹೆಗಾರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ವಿವಿಧ ವಿಭಾಗದಲ್ಲಿ ಒಟ್ಟು 11 ಸ್ಥಾನಗಳಿಗೆ ಒಪ್ಪಂದದ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಕೆಗೆ ಜ.31 ಕೊನೆಯ ದಿನವಾಗಿದೆ. ಅಧಿಕೃತ ಜಾಲತಾಣ https://www.nsilindia.co.in/careerದ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ನೇಮಕಾತಿ ಅಧಿಸೂಚನೆಯ ದಿನಾಂಕ – ಡಿಸೆಂಬರ್ 31, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31, 2026
- ಆನ್ಲೈನ್ ಅರ್ಜಿ ನಮೂನೆಯ ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 10, 2026
ಹುದ್ದೆಗಳ ವಿವರ:
ಹಿರಿಯ ಸಲಹೆಗಾರ – 01 ಹುದ್ದೆ
ಸಲಹೆಗಾರ(ಹಣಕಾಸು) – 01 ಹುದ್ದೆ
ಯುವ ಸಲಹೆಗಾರ – 01 ಹುದ್ದೆ
ಸಲಹೆಗಾರ (HR & ಅಡ್ಮಿನ್) – 01 ಹುದ್ದೆ
ಸಲಹೆಗಾರ (ಪರ್ಚೆಸ್ & ಸ್ಟೋರ್)- 01 ಹುದ್ದೆ
ಯುವ ಸಲಹೆಗಾರ (ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್) – 01 ಹುದ್ದೆ
ಯುವ ಸಲಹೆಗಾರ (ಮೆಕ್ಯಾನಿಕಲ್) – 01 ಹುದ್ದೆ
ಸಲಹೆಗಾರ (SATCOM)- 01 ಹುದ್ದೆ
ಸಲಹೆಗಾರ (EO)- 01 ಹುದ್ದೆ
ಸಲಹೆಗಾರ (ಸೈಬರ್ ಸೆಕ್ಯೂರಿಟಿ) – 01 ಹುದ್ದೆ
ಸಲಹೆಗಾರ (ಸಿಸ್ಟಮ್ & ಅಪ್ಲಿಕೇಶನ್) – 01 ಹುದ್ದೆ
ಒಟ್ಟು – 11 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್, ಎಂ.ಟೆಕ್, ಸಿ.ಎ/ಐ.ಸಿ.ಡಬ್ಲ್ಯೂಎ, ಸ್ನಾತಕೋತ್ತರ ಪದವಿ/ಎಂಬಿಎ/ಎಂಎಸ್ಡಬ್ಲ್ಯೂ/ಎಂಎ ಪದವಿ ಪೂರ್ಣಗೊಳಿಸಿರಬೇಕು.
• ವಿವರವಾದ ವಿದ್ಯಾರ್ಹತೆ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
✓ಹಿರಿಯ ಸಲಹೆಗಾರ ಹುದ್ದೆಗೆ; ಗರಿಷ್ಠ ವಯಸ್ಸಿನ ಮಿತಿ – 45 ವರ್ಷಗಳು
✓ ಸಲಹೆಗಾರ(ಹಣಕಾಸು), ಸಲಹೆಗಾರ(HR & ಅಡ್ಮಿನ್), ಸಲಹೆಗಾರ(ಪರ್ಚೆಸ್ & ಸ್ಟೋರ್), ಸಲಹೆಗಾರ(SATCOM), ಸಲಹೆಗಾರ(ಸೈಬರ್ ಸೆಕ್ಯೂರಿಟಿ), ಸಲಹೆಗಾರ ಹಾಗೂ (ಸಿಸ್ಟಮ್ & ಅಪ್ಲಿಕೇಶನ್) ಹುದ್ದೆಗಳಿಗೆ; ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
✓ ಯುವ ಸಲಹೆಗಾರ, ಯುವ ಸಲಹೆಗಾರ (ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್), ಯುವ ಸಲಹೆಗಾರ(ಮೆಕ್ಯಾನಿಕಲ್) ಹಾಗೂ ಸಲಹೆಗಾರ(EO) ಹುದ್ದೆಗಳಿಗೆ; ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
ವಯೋಮಿತಿ ಸಡಿಲಿಕೆ: ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ -05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ -10 ರಿಂದ 15 ವರ್ಷಗಳು.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
ಸಂಬಳ:
ಯುವ ಸಲಹೆಗಾರ ಹುದ್ದೆಗಳಿಗೆ – ₹40,000 ದಿಂದ 140,000/-
ಸಲಹೆಗಾರ ಹುದ್ದೆಗಳಿಗೆ – ₹50,000 ದಿಂದ 160,000/-
ಹಿರಿಯ ಸಲಹೆಗಾರ ಹುದ್ದೆಗಳಿಗೆ – ₹80,000 ದಿಂದ 2,20,000/-
ಅರ್ಜಿ ಶುಲ್ಕ:
ಮಹಿಳೆಯರು, ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ- ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೂ – 500ರೂ.
ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
• ಅರ್ಜಿ ಭರ್ತಿ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://forms.zohopublic.in/bhushansinghnsil1/form/JobApplicationFormforConsultantsonFTCC/formperma/q71ZeaB8gTPmYyvkcWhsuE_k8z8ByrUl6VrYrYvDNS0
• ನಂತರ ಇ-ಮೇಲ್ ಐಡಿ ಹಾಗೂ ಒಟಿಪಿ ನಮೂದಿಸಿ ಮುಂದುವರೆಯಿರಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಈ ಕೆಳಗಿನ ವಿಳಾಸಕ್ಕೆ ಫೆಬ್ರವರಿ 10 ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಮುಖ್ಯ ವ್ಯವಸ್ಥಾಪಕ – ಮಾನವ ಸಂಪನ್ಮೂಲ ಮತ್ತು ಆಡಳಿತ, ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, 11ನೇ ಮಹಡಿ, ಬ್ರಿಗೇಡ್ ರೂಬಿಕ್ಸ್, 20, ವಾಚ್ ಫ್ಯಾಕ್ಟರಿ ರಸ್ತೆ, ಹಂತ-1, ಯಶವಂತಪುರ, ಬೆಂಗಳೂರು-560013
Important Direct Links:
| Official Notification PDF | Download |
| Online Application Form Link | Apply Now |
| Official Website | https://www.nsilindia.co.in/ |
| More Updates | KarnatakHelp.in |



