ಪ್ರಸಕ್ತ ಶೈಕ್ಷಣಿಕ ಸಾಲಿನ NMMS ವಿದ್ಯಾರ್ಥಿ ವೇತನ ಪಡೆಯಲು ಅರ್ಹ ಫಲಾನುಭವಿ(ವಿದ್ಯಾರ್ಥಿ)ಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ NMMS ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ NSP ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹ ಹೊಸ ಹಾಗೂ ರಿನಿವಲ್ ವಿದ್ಯಾರ್ಥಿಗಳು NSP ಅಧಿಕೃತ ವೆಬ್ಸೈಟ್ scholarships.gov.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ತಿಳಿಸಿದ್ದಾರೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
NMMS ವಿದ್ಯಾರ್ಥಿವೇತನ:
ಶಿಕ್ಷಣ ಸಚಿವಾಲಯದ ಕೇಂದ್ರ ಪ್ರಾಯೋಜಿತ ಉಪಕ್ರಮವಾದ NMMS ವಿದ್ಯಾರ್ಥಿವೇತನ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಉತ್ತೇಜಿಸಲು ಹಾಗೂ ಆರ್ಥಿಕ ನೆರವನ್ನು ನೀಡಲಾಗುವ ಒಂದು ವಿದ್ಯಾರ್ಥಿ ವೇತನ ಕಾರ್ಯಕ್ರಮವಾಗಿದೆ.
ವಿದ್ಯಾರ್ಥಿ ವೇತನದ ಮೊತ್ತ:
ಪರೀಕ್ಷೆಯಲ್ಲಿ ಉತ್ತೀರ್ಣರಾದವರು ವಾರ್ಷಿಕ 12,000 ರೂ. ಹಾಗೂ ಮಾಸಿಕ 1,000 ರೂ. ವಿದ್ಯಾರ್ಥಿವೇತನ ಪಡೆಯುತ್ತಾರೆ.
ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅವರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಜೋಡಣೆಯೊಂದಿಗೆ ಬ್ಯಾಂಕ್ ಖಾತೆ ನೋಂದಾಯಿತ ಮೊಬೈಲ್ ಸಂಖ್ಯೆ
- ಆಧಾರ್ ಕಾರ್ಡ್
- ಇ-ಮೇಲ್ ಐಡಿ
- ಎರಡು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಜಾತಿ ಪ್ರಮಾಣಪತ್ರ
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ.
•ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಅಂಗವೈಕಲ್ಯ ಸ್ಥಿತಿ ಪ್ರಮಾಣಪತ್ರ (ಅನ್ವಯಿಸಿದರೆ)
One Time Registration (OTR) ವಿವರ:
• 2025-26ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಗಳನ್ನು ಸಲ್ಲಿಸಲು One Time Registration(OTR) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
• ಒನ್ ಟೈಮ್ ರಿಜಿಸ್ಟ್ರೇಷನ್ (OTR) – ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ (unique) ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನ ಮೂಲಕ ಅರ್ಜಿ ಸಲ್ಲಿಸಲು ಅನ್ವಯವಾಗುತ್ತದೆ.
• NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSPನಲ್ಲಿ ನೊಂದಾಯಿತ ಮೊಬೈಲ್‌ಗೆ SMS ಮೂಲಕ Reference/OTR ಸಂಖ್ಯೆ ಕಳುಹಿಸಲಾಗುತ್ತದೆ.
• Fresh ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ (Fresh) ವಿದ್ಯಾರ್ಥಿಗಳು National Scholarship Portal Student Login ನಲ್ಲಿ ಲಭ್ಯವಿರುವ Know your OTR ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರೆಫೆರನ್ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
• 2025-26ನೇ ಸಾಲಿನಲ್ಲಿ NSP ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು. ( ಆಧಾರ್ ನಲ್ಲಿ ಅತಿ ಚಿಕ್ಕ ವಯಸ್ಸಿನ ಫೋಟೊಗಳಿರುವುದರಿಂದ Face authentication Error ಎಂದು ಕಾಣಿಸಿಕೊಳ್ಳುತ್ತದೆ)
NMMS ವಿದ್ಯಾರ್ಥಿವೇತನಕ್ಕೆ ಆಯ್ಕೆ ವಿಧಾನ:
- ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT)
- ಸ್ಕೂಲಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ (SAT)
ಅರ್ಜಿ ಸಲ್ಲಿಸುವ ವಿಧಾನ:
- NSP ಅಧಿಕೃತ ವೆಬ್ ಸೈಟ್ https://scholarships.gov.in/ ಗೆ ಭೇಟಿ ನೀಡಿ.
- ಹೊಸ ಬೆಳಕಿದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ OTR ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
- NMMS ವಿದ್ಯಾರ್ಥಿ ವೇತನ 2025-26 – ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ಮೇಲೆ ಕ್ಲಿಕ್ ಮಾಡಿ.
- ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಮಾಡಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
NSP NMMS Scholarship 2025-26 Apply Link | New Apply || Renewal |
Official Website | dsert.karnataka.gov.in |
More Updates | Karnataka Help.in |