ಭಾರತದ ಪ್ರಮುಖ ಇಂಧನ ಕಂಪನಿಯಾದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ONGC)ದಲ್ಲಿ ವಿವಿಧ ಟ್ರೇಡ್/ವಿಭಾಗದಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪದವೀಧರ, ಡಿಪ್ಲೊಮಾ, ಟ್ರೇಡ್ ಅಪ್ರೆಂಟಿಸ್ ವಿಭಾಗಗಳಿಗೆ ಒಟ್ಟು 2623 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ತರಬೇತಿ ನೀಡಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ONGC ಅಧಿಕೃತ ಜಾಲತಾಣ https://ongcindia.com/web/engಕ್ಕೆ ಭೇಟಿ ನೀಡಿ. ನ.06 ರೊಳಗೆ ಅರ್ಜಿ ಸಲ್ಲಿಸಬಹುದು.
ಉತ್ತರ ವಲಯ 165 ಹುದ್ದೆಗಳು ಮುಂಬೈ ವಲಯ – 569 ಹುದ್ದೆಗಳು ಪಶ್ಚಿಮ ವಲಯ – 856 ಹುದ್ದೆಗಳು ಪೂರ್ವ ವಲಯ – 458 ಹುದ್ದೆಗಳು ದಕ್ಷಿಣ ವಲಯ – 322 ಹುದ್ದೆಗಳು ಕೇಂದ್ರ ವಲಯ – 253 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ/ಸರ್ಕಾರಿ ನಿಯಂತ್ರಕ ಸಂಸ್ಥೆಯಿಂದ ಅನುಮೋದಿಸಲ್ಪಟ್ಟ ವಿಶ್ವವಿದ್ಯಾಲಯ/ಸಂಸ್ಥೆ/ಮಂಡಳಿಯಿಂದ 10ನೇ ತರಗತಿ, ಸಂಬಂಧಿತ ವಿಭಾಗದಲ್ಲಿ ಐಟಿಐ/ಎಂಜಿನಿಯರಿಂಗ್/ ಪದವಿ(ಬಿಎ.ಬಿಎಸ್ಸಿ, ಬಿ.ಕಾಂ..) ಪೂರ್ಣಗೊಳಿಸಿರಬೇಕು.
ಪದವೀಧರ ಅಪ್ರೆಂಟಿಸ್ – ಬಿ.ಎ/ಬಿ.ಕಾಂ/ಬಿ.ಎಸ್ಸಿ /ಬಿ.ಬಿ.ಎ/ಬಿ.ಇ./ಬಿ.ಟೆಕ್ ಮೂರು ವರ್ಷಗಳ ಡಿಪ್ಲೊಮಾ – ಸಂಬಂಧಿತ ವಿಭಾಗದಲ್ಲಿ ಇಂಜಿನಿಯರಿಂಗ್ ಟ್ರೇಡ್ ಅಪ್ರೆಂಟಿಸ್ – ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯುಸಿ ಟ್ರೇಡ್ ಅಪ್ರೆಂಟಿಸ್ (1 ವರ್ಷದ ಐಟಿಐ) – 1 ವರ್ಷದ ಐಟಿಐ ಟ್ರೇಡ್ ಅಪ್ರೆಂಟಿಸ್ (2 ವರ್ಷದ ಐಟಿಐ) – 2 ವರ್ಷದ ಐಟಿಐ
ವಯೋಮಿತಿ:
06-11-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 24 ವರ್ಷಗಳು
ವಯೋಮಿತಿ ಸಡಿಲಿಕೆ;
ಪ. ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು ಓಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10-15 ವರ್ಷಗಳು
ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ
ದಾಖಲೆ ಪರಿಶೀಲನೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ 8,200ರೂ. – 12,300ರೂ. ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.
ಪದವೀಧರ ಅಪ್ರೆಂಟಿಸ್ಗಳಿಗೆ – 12,300/- ಡಿಪ್ಲೊಮಾ ಅಪ್ರೆಂಟಿಸ್ಗಳಿಗೆ- 10,900/- ಟ್ರೇಡ್ ಅಪ್ರೆಂಟಿಸ್ಗಳಿಗೆ – 8,200/- ಟ್ರೇಡ್ (1 ವರ್ಷದ ಐಟಿಐ)ಅಪ್ರೆಂಟಿಸ್ಗಳಿಗೆ – 9,600/- ಟ್ರೇಡ್ (2 ವರ್ಷದ ಐಟಿಐ) ಅಪ್ರೆಂಟಿಸ್ಗಳಿಗೆ – 10,560/-
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ..
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ನೇಮಕಾತಿಯ ಜಾಹೀರಾತಿನಲ್ಲಿ ನೀಡಲಾದ ಕ್ರಮ ಸಂಖ್ಯೆ 1 ರಿಂದ 29 ರವರೆಗಿನ ಟ್ರೇಡ್ಗಳಿಗೆ ಅಭ್ಯರ್ಥಿಗಳು NAPS ಅಧಿಕೃತ ಜಾಲತಾಣ https://www.apprenticeshipindia.gov.in/ ಕ್ಕೆ ಭೇಟಿ ನೀಡಿ.
ನೇಮಕಾತಿಯ ಜಾಹೀರಾತಿನಲ್ಲಿ ನೀಡಲಾದ SI ಸಂಖ್ಯೆ 30 ರಿಂದ 39 (ಪ್ಯಾರಾ D) ನಲ್ಲಿ ಉಲ್ಲೇಖಿಸಲಾದ ಟ್ರೇಡ್ಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು NATS ಅಧಿಕೃತ ಜಾಲತಾಣ https://nats.education.gov.in ಕ್ಕೆ ಭೇಟಿ ನೀಡಿ.
ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
ಬಳಿಕ “ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್, Advt. No:ONGC/APPR/1/2025 ಅಡಿಯಲ್ಲಿ ಅಪ್ರೆಂಟಿಸ್ ಗಳ ನಿಯೋಜನೆ ಜಾಹೀರಾತು” ಹುಡುಕಿ ಅನ್ವಯಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ನೀವು ಅಪ್ರೆಂಟಿಸ್ ಹುದ್ದೆಗಳಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುತ್ತೀರಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಮೇಲ್ ಐಡಿ ಮೂಲಕ ತಿಳಿಸಲಾಗುವುದು.
ಫಲಿತಾಂಶಗಳನ್ನು www.ongcapprentices.ongc.co.in ನಲ್ಲಿ ಪ್ರದರ್ಶಿಸಲಾಗುತ್ತದೆ.