ಸಾಮಾನ್ಯವಾಗಿ ಊಟ ಆದ ಮೇಲೆ ಒಮ್ಮೆ ಬೀಡಾ ಜಿಗಿಯುವ ಪದ್ಧತಿ ಬಹಳ ಹಿಂದಿನದು ನಮ್ಮ ಹಿರಿಯರು ಆಗಿನ ಕಾಲದಿಂದ ಊಟ ಆದ ಮೇಲೆ ಎಲೆ ಅಡಿಕೆ ಹಾಕಿಕೊಳ್ಳುವ ಪದ್ಧತಿ ನಡೆಸಿಕೊಂಡು ಬಂದಿದ್ದಾರೆ. ಅದು ಇಂದು ಸ್ವಲ್ಪ ಮಾಡ್ರನ್ ಲುಕ್ ತೆಗೆದುಕೊಂಡು ಬೀಡಾ ಆಗಿ ಬದಲಾಗಿದೆ. ಈಗಿನ ಮಾಮೂಲಿ ಹವ್ಯಾಸ ಅಂದ್ರೆ ಪಾನ್ ಬೀಡಾ ತಿನ್ನುವುದು. ಪಾನ್ ಬೀಡಾ ತಿನ್ನುವವರು ಯಾವ ಅಂಶವನ್ನು ಗಮನದಲ್ಲಿ ಇರಿಸಬೇಕು ಎಂದು ವೈದ್ಯರೇ ವಿವರಿಸಿದ್ದಾರೆ.
ಪಾನ್ ಹೆಚ್ಚಾಗಿ ತಿಂದರೆ ಕ್ಯಾನ್ಸರ್!
ಪಾನ್ ಅತೀ ಹೆಚ್ಚಾಗಿ ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಜರ್ದಾ ಬೀಡಾ ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದು, ಅತೀ ಹೆಚ್ಚು ಕೆಟ್ಟದಾಗಿರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ದುಷ್ಪರಿಣಾಮ ಬೀರುತ್ತದೆ. ಇನ್ನು ಇಡೀ ಪ್ರಪಂಚದಲ್ಲಿ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ, ನಾಲಿಗೆ ಮತ್ತು ಬಾಯಿಯ ಕ್ಯಾನ್ಸರ್ ಆಗುವುದು ಭಾರತದಲ್ಲೇ ಹೆಚ್ಚು. ಇದಕ್ಕೆ ಕಾರಣವೇ ಈ ಪಾನ್ ಬೀಡಾ.
ಹೆಚ್ಚು ಪಾನ್ ತಿನ್ನುವುದರಿಂದ, ಬಾಯಿಯ ಅಗಲ ಕಡಿಮೆಯಾಗುತ್ತ ಹೋಗುತ್ತದೆ. ಮುಂದೆ ನಾವು ಆಹಾರ ಕೂಡ ಸೇವಿಸಲು ಸಾಧ್ಯವಾಗುವುದಿಲ್ಲ. ಆ ರೀತಿಯಾಗಿ, ಕ್ಯಾನ್ಸರ್ ನಮ್ಮನ್ನು ಆವರಿಸುತ್ತದೆ ಎನ್ನುತ್ತಾರೆ ವೈದ್ಯರು.