Free Coaching Exam Hall Ticket 2025: ಜು.19ಕ್ಕೆ ನಡೆಯಲಿರುವ ಉಚಿತ ತರಬೇತಿ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ – ಕೆಇಎ

ಹಿಂದುಳಿದ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ ವತಿಯಿಂದ ಬ್ಯಾಂಕಿಂಗ್, ಗ್ರೂಪ್-ಸಿ, ಎಸ್.ಎಸ್.ಸಿ ಮತ್ತು ಆರ್.ಆರ್.ಬಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರವೇಶ ಪ್ರರೀಕ್ಷೆಯು ಜು.19 ನಡೆಯಲಿದ್ದು, ಸದರಿ ಪರೀಕ್ಷೆಯ ಹಾಲ್ ಟಿಕೆಟ್ಅನ್ನು ಕೆಇಎ ಇಂದು ಬಿಡುಗಡೆಗೊಳಿಸಿದೆ. ಜು.19 ರಂದು ಸಾಮಾನ್ಯ ಅಧ್ಯಯನ ಪರೀಕ್ಷೆಯು ಮಧ್ಯಾಹ್ನ 2.30 ರಿಂದ 4.30ರವರೆಗೆ ನಡೆಯಲಿದೆ. ಒಟ್ಟು 100 ಅಂಕಗಳ ಪರೀಕ್ಷೆ ಇದಾಗಿದೆ. ಪ್ರವೇಶ ಪತ್ರವನ್ನು ಅಧಿಕೃತ … More

Free Coaching Exam Dress Code 2025: ಉಚಿತ ಕೋಚಿಂಗ್ ಪರೀಕ್ಷೆಯಲ್ಲಿ ವಸ್ತ್ರ ಸಂಹಿತೆ ಹೀಗಿರಬೇಕು!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಉಚಿತ ಕೋಚಿಂಗ್ ಸ್ಪರ್ಧಾತ್ಮಕ ಪರೀಕ್ಷೆ(KEA Free IAS KAS Exam Dress Code 2025)ಗೆ ಸಂಬಂಧಿಸಿದಂತೆ ಪರೀಕ್ಷಾ ಅಭ್ಯರ್ಥಿಗಳಿಗೆ ನಿಗದಿತ ವಸ್ತ್ರಸಂಹಿತೆ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಈ ಸಂಬಂಧ ಪ್ರಾಧಿಕಾರವು ಉಚಿತ ಕೋಚಿಂಗ್ ಪರೀಕ್ಷೆಯ ವಸ್ತ್ರಸಂಹಿತೆ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಪರೀಕ್ಷೆಯನ್ನು ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸುವ ಸಲುವಾಗಿ ಪ್ರಾಧಿಕಾರವು ಪರೀಕ್ಷಾ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ಜಾರಿ ಮಾಡಿ, ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಈ ಕುರಿತಂತೆ ಸಂಪೂರ್ಣ … More

UGCET 2025: ಮೊದಲನೇ ಸುತ್ತಿನ ಸೀಟು ಹಂಚಿಕೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

UGCET-2025 ರ ಪ್ರವೇಶಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಅನ್ನು ಜು.8ರಂದು ಪ್ರಕಟಿಸಿತ್ತು, ಇದೀಗ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಯುಜಿಸಿಇಟಿ-2025 ಮೊದಲನೇ ಸುತ್ತಿನ ಸೀಟು ಹಂಚಿಕೆಯ ಪ್ರಕ್ರಿಯೆಯನ್ನು ಜು.08 ರಿಂದ 25 ರವರೆಗೆ (ಆಯ್ಕೆ ನಮೂದು, ಅಣಕು ಫಲಿತಾಂಶ, ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ) 3 ಹಂತಗಳಲ್ಲಿ ನಡೆಸಲಾಗುವುದು ಎಂದು ವೇಳಾಪಟ್ಟಿಯಲ್ಲಿ ಕೆಇಎ ತಿಳಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು … More

KCET Option Entry 2025: 1ನೇ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆಗಳನ್ನು ನಮೂದಿಸಲು ಕಾಲಾವಕಾಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) UGCET-2025ರ ಪ್ರವೇಶಾತಿ ಸಂಬಂಧ ಇಂಜಿನಿಯರಿಂಗ್, ವೆಟರಿನರಿ, ಕೃಷಿವಿಜ್ಞಾನ ಕೋರ್ಸುಗಳಿಗೆ ಜು.08ರಿಂದ ಆಯ್ಕೆಗಳನ್ನು ದಾಖಲಿಸಲು ಪ್ರಾರಂಭಿಸಲಾಗಿದೆ. UGCET-2025ರ ಪ್ರವೇಶಕ್ಕೆ ಸಲುವಾಗಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಇಚ್ಚೆ/ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದ್ದು, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-2025ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ … More

PMFBY Crop Insurance 2025: ಬೆಳೆ ವಿಮೆಗೆ ನೋಂದಣಿ ಪ್ರಾರಂಭ, ಕೊನೆ ದಿನಾಂಕವೇನು?

2025-26ನೇ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಣಿ ಪ್ರಾರಂಭವಾಗಿದೆ ಮಳೆ ಅಭಾವದಿಂದ ಬಿತ್ತನೆ ವಿಫಲಗೊಳ್ಳುವುದು, ತೇವಾಂಶ ಕೊರತೆ, ಬರಗಾಲದಿಂದ ಬೆಳೆಗಳ ನಾಶ, ಅತಿಯಾದ ಮಳೆಯಿಂದ ಬೆಳೆ ಮುಳುಗಡೆಯಾಗಿರುವುದು, ಕಟಾವಾದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ 14 ದಿನಗಳೊಳಗಾಗಿ ಅಕಾಲಿಕ ಚಂಡಮಾರುತ, ಮಳೆಯಿಂದ ನಷ್ಟವಾದರೆ(ಬೆಳೆಯು ಬಿತ್ತನೆಯಾಗಿ ಒಂದು ತಿಂಗಳಾಗಿರಬೇಕು ಮತ್ತು ಕಟಾವಿಗಿಂತ 15 ದಿನಕ್ಕಿಂತ ಮುಂಚಿತವಾಗಿರಬೇಕು) ಮುಂತಾದ ಇಂತಹ ಸಮಸ್ಯೆಗಳಿಗೆ ವಿಮೆ ಸಿಗಲಿದೆ. ವಿಮೆಗೆ … More

RRC NWR Vacancy 2025: ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಪ್ರಾರಂಭ

2025-26ನೇ ಸಾಲಿಗೆ ಕ್ರೀಡಾ ಕೋಟಾದಡಿಯಲ್ಲಿ 54 ಹುದ್ದೆಗಳ ನೇಮಕಾತಿಗಾಗಿ ವಾಯುವ್ಯ ರೈಲ್ವೆಯು ಅಧಿಸೂಚನೆ ಬಿಡುಗಡೆ ಮಾಡಿದೆ. ರೈಲ್ವೆ ನೇಮಕಾತಿ ಕೋಶ (RRC) ಜೈಪುರ, (ರಾಜಸ್ಥಾನ) ವಾಯುವ್ಯ ರೈಲ್ವೆ ನೇಮಕಾತಿ 2025 – ಕ್ರೀಡಾ ಕೋಟಾದಡಿಯಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಕ್ರೀಡಾ ವ್ಯಕ್ತಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು RRC ಅಧಿಕೃತ ವೆಬ್ ಸೈಟ್ https://rrcjaipur.in/ಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ … More

SBI CBO Admit Card 2025: ಸಿಬಿಟಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಡ್ಮಿಟ್ CRPD/CBO/2025-26/03 ಅಡಿಯಲ್ಲಿ ವೃತ್ತ ಆಧಾರಿತ ಅಧಿಕಾರಿಗಳ (CBO) ಹುದ್ದೆಗಳ ನೇಮಕಾತಿಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಎಸ್.ಬಿ.ಐ ಒಟ್ಟು 2964(2600 + 364 ಬ್ಯಾಕ್‌ಲಾಗ್) ವೃತ್ತ ಆಧಾರಿತ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಸಂಬಂಧ ಜುಲೈ 20ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವ ಪರೀಕ್ಷೆಯ ಪ್ರವೇಶ ಪತ್ರವನ್ನು ಜು.10ರಿಂದ 20ವರೆಗೆ https://sbi.co.in/ ಗೆ ಭೇಟಿ ನೀಡಿ. ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತು … More

Adarsha 3rd Round Result 2025(OUT): ಆದರ್ಶ ವಿದ್ಯಾಲಯ ಮೂರನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

2025-26ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕೆ ಸಂಬಂಧಿಸಿದ ಮೂರನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. 6ನೇ ತರಗತಿ ಪ್ರವೇಶಾತಿಗಾಗಿ ಮಾ.23ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಯ ಎರಡು ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಿತ್ತು, ಜು.10ರಂದು ಮೂರನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್ಸೈಟ್ http://164.100.133.7:82/home.aspx ನಲ್ಲಿ ಬಿಡುಗಡೆಗೊಳಿಸಿದೆ. ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸೀಟು ಹಂಚಿಕೆಯ ಫಲಿತಾಂಶವನ್ನು ಪರಿಶೀಲಿಸಬಹುದು ಎಂದು ವಿದ್ಯಾಲಯ … More

Adarsha Vidyalaya Result 2025: 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ, ಕಟ್-ಆಫ್ ಬಿಡಿಗಡೆ

Adarsha Vidyalaya Result 2025: ಆದರ್ಶ ವಿದ್ಯಾಲಯ ಮಾದರಿ ಶಾಲೆ ಕರ್ನಾಟಕವು ಮಾ.23ರಂದು ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಸದರಿ ಪರೀಕ್ಷೆಯ ಎರಡು ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಿತ್ತು, ಇದೀಗ ಮೂರನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಮೂರನೇ ಸುತ್ತಿನಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶ ಪಡೆಯಲು ಜು.17ರವೆರೆಗೆ ಅವಕಾಶ ಕಲ್ಪಿಸಲಾಗಿದೆ. Adarsha Vidyalaya Result 2025 Exam Name Adarsha Vidyalaya … More

Media Internship 2025: ಮಾಧ್ಯಮ ಅಕಾಡೆಮಿಯಿಂದ ಇಂಟರ್ನ್‌ಶಿಪ್‌ಗಾಗಿ ಅರ್ಜಿ ಆಹ್ವಾನ

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್‌ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಒಟ್ಟು 24 ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಬರವಣಿಗೆಯಲ್ಲಿ ಪರಿಣತಿ ಹೊಂದಿರುವ, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ತರಬೇತಿಗೆ ಬೇಕಾದ ವಿದ್ಯಾರ್ಹತೆ, … More