ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಉನ್ನತೀಕರಿಸಲಾಗಿರುವ ವಸತಿ ಶಾಲಾ/ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 8320 ಸ್ಥಾನಗಳಿಗೆ ಪ್ರವೇಶಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಏ.29 ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು/ಪೋಷಕರು ಅರ್ಜಿ ಸಲ್ಲಿಸಲು ಕೆಆರ್‌ಇಐಎಸ್ ಅಧಿಕೃತ ಜಾಲತಾಣ https://kreis.karnataka.gov.in/ಕ್ಕೆ ಭೇಟಿ ನೀಡಿ.
ಪ್ರವೇಶಾತಿಗೆ ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ ಏಪ್ರಿಲ್ 23
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 29
- 1ನೇ ಹಂತದ ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ ಮೇ 04
- 1ನೇ ಹಂತದ ಆಯ್ಕೆಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ಪ್ರವೇಶಾತಿಯ ದಿನಾಂಕ ಮೇ 08
- 2ನೇ ಹಂತದ ಖಾಲಿ ಸ್ಥಾನಗಳ ಪಟ್ಟಿ ಪ್ರಕಟಣೆ ದಿನಾಂಕ ಮೇ 12
- 2ನೇ ಹಂತದ ಆಯ್ಕೆಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ಪ್ರವೇಶಾತಿಯ ದಿನಾಂಕ ಮೇ 19
- 3ನೇ ಹಂತದ ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ ಮೇ 22
- 3ನೇ ಹಂತದ ಆಯ್ಕೆಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ಪ್ರವೇಶಾತಿಯ ದಿನಾಂಕ ಮೇ 27
- ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ಆರಂಭ ದಿನಾಂಕ ಮೇ 29
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್.ಎಸ್.ಎಲ್.ಸಿ (10ನೇ) ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ:
ಪ್ರಥಮ ಪಿಯುಸಿ ಪ್ರವೇಶಾತಿಗೆ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ, ಮೆರಿಟ್ ಕಮ್ ಮೀಸಲಾತಿ ಹಾಗೂ ವಿದ್ಯಾರ್ಥಿಗಳ ಆದ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ:
KREIS ವಸತಿ ಶಾಲೆ/ಕಾಲೇಜುಗಳಲ್ಲಿ ಲಭ್ಯವಿರುವ ಶೇ.100ರಷ್ಟು ಸ್ಥಾನಗಳಲ್ಲಿ ಆಯಾ ಜಿಲ್ಲೆ ಸ್ಥಳೀಯ ಅಭ್ಯರ್ಥಿಗಳಿಗೆ ವರ್ಗವಾರು ಶೇ.75 ರಷ್ಟು ಹಾಗೂ ಇತರೆ ಜಿಲ್ಲೆಗಳ ಅಭ್ಯರ್ಥಿಗಳಿಗೆ ಶೇ.25 ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
- ಮಾನ್ಯವಾದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ
- ಆಧಾರ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಎಸ್.ಎಸ್.ಎಲ್.ಸಿ ಅಂಕಪಟ್ಟಿ
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ವ್ಯಾಸಂಗ ಪ್ರಮಾಣ ಪತ್ರ
- ಇತ್ಯಾದಿ ಅಗತ್ಯ ದಾಖಲಾತಿಗಳು..
ಅರ್ಜಿ ಸಲ್ಲಿಸುವ ವಿಧಾನ
• KREIS ಅಧಿಕೃತ ಜಾಲತಾಣ https://kreis.karnataka.gov.in/ಕ್ಕೆ ಭೇಟಿ ನೀಡಿ.
• ಬಳಿಕ *ಸುದ್ದಿಗಳು ಮತ್ತು ಸೇವೆಗಳು* ಶೀರ್ಷಿಕೆಯ ಕೆಳಗೆ ನೀಡಲಾಗಿರುವ “2026-27 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ದಾಖಲಾತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಮುಂದುವರೆದಂತೆ “2026-27 ನೇ ಶೈಕ್ಷಣಿಕ ಸಾಲಿಗೆ KREIS ಕಾಲೇಜುಗಳ ಪ್ರಥಮ ಪಿ.ಯು.ಸಿ ದಾಖಲಾತಿಗಾಗಿ ಆನ್ಲೈನ್ ಅರ್ಜಿ” ಆಯ್ಕೆಯನ್ನು ಆರಿಸಿ.
• SATS ಸಂಖ್ಯೆ, ಅಭ್ಯರ್ಥಿಯ ಹೆಸರು ಹಾಗೂ ಜನ್ಮ ದಿನಾಂಕ ನಮೂದಿಸಿ.
• ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Notification PDF | Download |
| KREIS 1st PUC Admission 2026-27 Online Application Form Link | Apply Now |
| Official Website | kreis.karnataka.gov.in |
| More Updates | KarnatakaHelp.in |
I am already registered but there is no application format
I am registered around 3 members application and how can I take a copy of registered format. Please send me a way
I am registered the application and now how can I take a copy of registered format. Please send me a way
How to get the registered format.
I am already registered
Maam to not results not available then send student approval tell me