PGCIL Supervisor and ET Recruitment 2024: ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (PGCIL)ನಲ್ಲಿ ಖಾಲಿ ಇರುವ ತರಬೇತಿ ಮೇಲ್ವಿಚಾರಕ (ಎಲೆಕ್ಟ್ರಿಕಲ್) ಮತ್ತು ಟ್ರೈನಿ ಇಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಸ್ತುತ ಈ ನೇಮಕಾತಿ(PGCIL Supervisor Recruitment 2024)ಗೆ ಸಂಬಂಧಿಸಿದ ಅರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೆ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.
Shortview of PGCIL ET and Supervisor Notification 2024
Organization Name – Powergrid Corporation of India Limited
Post Name – Trainee Supervisor (Electrical) and Trainee Engineer (Electrical)
Total Vacancy – 117
Application Process: online
Job Location – All Over India
Important Dates:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 16, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 6, 2024
Vacancy Details:
- ತರಬೇತಿ ಮೇಲ್ವಿಚಾರಕ – 70 ಹುದ್ದೆಗಳು
- ಟ್ರೈನಿ ಇಂಜಿನಿಯರ್ – 47 ಹುದ್ದೆಗಳು
ಶೈಕ್ಷಣಿಕ ಅರ್ಹತೆಗಳು:
ಈ ನೇಮಕಾತಿಗೆ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Diploma/B.E./ B.Tech/ B.Sc ಪದವಿಯನ್ನು ಹೊಂದಿರಬೇಕು.
ತರಬೇತಿ ಮೇಲ್ವಿಚಾರಕ | Diploma in Electrical with Minimum 70% Marks |
ಟ್ರೈನಿ ಇಂಜಿನಿಯರ್ | B.E./ B.Tech/ B.Sc. (Engg.) in Electrical with Minimum 60% Marks + GATE 2024 |
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಆಧಾರಿತವಾಗಿ 06-11-2024ರಂತೆ ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು.
- ತರಬೇತಿ ಮೇಲ್ವಿಚಾರಕ – ಕನಿಷ್ಠ: 18ವರ್ಷ ಗರಿಷ್ಠ: 27ವರ್ಷ
- ಟ್ರೈನಿ ಇಂಜಿನಿಯರ್ – 18ವರ್ಷ ಗರಿಷ್ಠ: 28ವರ್ಷ
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ (ತರಬೇತಿ ಮೇಲ್ವಿಚಾರಕ ಹುದ್ದೆಗೆ)
- ಕಿರುಪಟ್ಟಿ [ಗೇಟ್ 2024, ವರ್ತನೆಯ ಮೌಲ್ಯಮಾಪನ, ಗುಂಪು ಚರ್ಚೆ ಮತ್ತು ಸಂದರ್ಶನ] – ಟ್ರೈನಿ ಇಂಜಿನಿಯರ್ ಹುದ್ದೆಗೆ ಮಾತ್ರ
- ಡಾಕ್ಯುಮೆಂಟ್ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
- SC/ ST/ PWD/ Ex-SM – ಯಾವುದೇ ಅರ್ಜಿ ಶುಲ್ಕವಿಲ್ಲ
- ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ. 500/- (ಟ್ರೈನಿ ಇಂಜಿನಿಯರ್ ಹುದ್ದೆಗೆ)
- ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ. 300/- (ತರಬೇತಿ ಮೇಲ್ವಿಚಾರಕ ಹುದ್ದೆಗೆ)
How to Apply for PGCIL Trainee Supervisor and Engineer Trainee Recruitment 2024
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ;
- PGCIL ವೆಬ್‌ಸೈಟ್‌ಗೆ ಭೇಟಿ ನೀಡಿ: https://www.powergrid.in/
- “Careers” ವಿಭಾಗಕ್ಕೆ ಹೋಗಿ ಮತ್ತು “Current Openings” ಕ್ಲಿಕ್ ಮಾಡಿ.
- “Engineer Trainee (ET) ಅಥವಾ Trainee-Supervisor (Electrical) 2024” ಲಿಂಕ್ ಅನ್ನು ಕ್ಲಿಕ್ ಮಾಡಿ.
- “Click here to register/login and apply” ಬಟನ್ ಕ್ಲಿಕ್ ಮಾಡಿ.
- ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿಯನ್ನು ಸಲ್ಲಿಸಿ.
Important Direct Links:
Trainee Supervisor Official Notification PDF | Download |
Engineer Trainee Official Notification PDF | Download |
Supervisor and ET Online Application Form Link | Apply Now |
Official Website | powergrid.in |
More Updates | KarnatakaHelp.in |