WhatsApp Channel Join Now
Telegram Group Join Now

PGET-2024 Registration: ಮೊದಲ ಸುತ್ತಿನ ಆಯ್ಕೆಯ ಪ್ರವೇಶ ಲಿಂಕ್ & ಶುಲ್ಕ ವಿವರಗಳು ಬಿಡುಗಡೆ

PGET-2024 Registration: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024 – 25 ನೇ ಸಾಲಿನ ರಾಜ್ಯದಲ್ಲಿನ ಸ್ನಾತಕೋತ್ತರ ಪದವಿ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶ‌ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ದಂತ ವೈದ್ಯಕೀಯ ಕೋರ್ಸುಗಳು ಪ್ರವೇಶಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸೀಟುಗಳು, ಖಾಸಗಿ ಮತ್ತು ಅಲ್ಪಸಂಖ್ಯಾತ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೂಟದ ಸೀಟುಗಳು ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.‌ ನೀಟ್ ಪಿಜಿ 2024 ರಲ್ಲಿ ಅರ್ಹತೆಯನ್ನು ಪಡೆದಿರುವ ಹಾಗೂ ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಅಭ್ಯರ್ಥಿಗಳಿಂದ 2024-25ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ ಸ್ನಾತಕೋತ್ತರ ಡಿಎನ್‌ಬಿ ಹಾಗೂ ಡಿಪ್ಲೊಮ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿಯೂ ಸಹ ಪ್ರಾಧಿಕಾರವು ಅರ್ಜಿ ಆಹ್ವಾನಿಸಿದೆ.

Pget-2024 Registration
Pget-2024 Registration

ಪಿಜಿಇಟಿ 2024ಕ್ಕೆ ಆನ್‌ಲೈನ್ ಮೂಲಕ ನೋಂದಣಿ ಹಾಗೂ ಅರ್ಜಿ ಸಲ್ಲಿಸಲು ಪೋರ್ಟಲ್‌ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಜುಲೈ.10ರ ಬೆಳಗ್ಗೆ 11 ರ ಒಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿ ಶುಲ್ಕ ಪಾವತಿಸಿ, ಅಂದು ರಾತ್ರಿ 6 ರರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in/ ನಲ್ಲಿ ಭೇಟಿ ನೀಡಬಹುದಾಗಿದೆ.

ಪ್ರವೇಶಾತಿ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು

  • ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ ದಿನಾಂಕ – ಜುಲೈ 8, 2024
  • ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ – ಜುಲೈ 11, 2024
  • ನೋಂದಣಿ ಮಾಡಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಜುಲೈ 10, 2024
  • ದಾಖಲಾತಿ ಪರಿಶೀಲನೆಗಳ ದಿನಾಂಕ – ಜುಲೈ 9 ರಿಂದ ಜುಲೈ 12 ರವರೆಗೆ
  • ಸೀಟು ಹಂಚಿಕೆಯ ಫಲಿತಾಂಶ ಪ್ರಕಟದ ದಿನಾಂಕ – ಜುಲೈ 14, 2024 ರಾತ್ರಿ 8 ಗಂಟೆಗೆ
  • ಅಭ್ಯರ್ಥಿಗಳು ಆಯ್ಕೆಗಳನ್ನು ಬದಲಿಸಿಕೊಳ್ಳಲು – ಜುಲೈ 14 ರಿಂದ 16ರ ವರೆಗೆ
  • ಪ್ರಥಮ ಹಂತದ ಫಲಿತಾಂಶ ಪ್ರಕಟ – ಜುಲೈ 17, 2024 ಬೆಳಗ್ಗೆ 11 ಗಂಟೆಗೆ
  • ಸೀಟು ಹಂಚಿಕೆಯಾದ ಅಭ್ಯರ್ಥಿಗಳು Choice ಅನ್ನು ಆಯ್ಕೆ ಮಾಡಲು ನಿಗದಿತ ದಿನಾಂಕ – ಜುಲೈ 17 ರಿಂದ 19,2024 ರವರೆಗೆ
  • ಕಾಲೇಜು ಶುಲ್ಕ ಪಾವತಿಯ ದಿನಾಂಕ – ಜುಲೈ 19 ರಿಂದ 20, 2024ರವರೆಗೆ


Choice-1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸುವುದು ಮತ್ತು ಪ್ರವೇಶ ಪತ್ರಗಳನ್ನು ಸ್ವೀಕರಿಸುವ ದಿನಾಂಕ – ಜುಲೈ 20 ರಿಂದ 21, 2024 ರವರೆಗೆ

Choice-2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ – ಜುಲೈ 22, 2024

Important Direct Links:

PGET 2024 First Round Option Entry LinkClick Here
PGET MDS Fees 2024 Details(Dated on July 13)Download
PGET 2024 Online Application Print Link (Dated on July 12)Click Here
PGET 2024 Online Application and Verification Extended NoticeDownload
PGET 2024 Admission Registration Notice PDFDownload
NEET MDS 2024 information bulletin PDFDownload
PGET-2024 Registration Eligibility and Documents PDFDownload
PGET-2024 Registration LinkApply Here
More UpdatesKarnataka Help.in

Leave a Comment