ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 18ನೇ ಕಂತಿಗಾಗಿ ಹಣವನ್ನು ಶೀಘ್ರದಲ್ಲೇ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಲೋಕಸಭಾ ಚುನಾವಣೆಯು ಮುಗಿದ ನಂತರ ಮೋದಿ 3.0 ಸರ್ಕಾರವು ರಚನೆಯಾಗಿದ್ದು, ಇದೇ ಜುಲೈ 23ರಂದು ನೂತನ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು ಮಂಡಿಸಲಿದ್ದಾರೆ. ಈ ಕಾರಣ 18ನೇ ಕಂತಿನ ಹಣವು ನವೆಂಬರ್ ವೇಳೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಪ್ರತಿ ರೈತರಿಗೆ ಪಕ್ಷಕ್ಕೆ 6 ಸಾವಿರ ಹಣ ನೀಡುತ್ತಿರುವ ಕೇಂದ್ರ ಸರ್ಕಾರವು 8 ಸಾವಿರಕ್ಕೆ ಏರಿಸುವ ನಿರೀಕ್ಷೆ ಇದೆ. ಈ ಬದಲಾವಣೆಯನ್ನು ಮೊದಲ ಬಜೆಟ್ ನಲ್ಲಿ ಪ್ರಕಟಿಸುವ ಸಾಧ್ಯತೆ ಇರುವುದರಿಂದ 18ನೇ ಕಂತಿನ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದಿಲ್ಲ.
ಕಳೆದ 17ನೇ ಕಂತನ್ನು ಈ ವರ್ಷದ ಜೂನ್ 18 ರಂದು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು .
PM-KISAN ಯೋಜನೆಯಡಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳನ್ನು ಪಡೆಯುತ್ತಾರೆ, ಇದು ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೀಡಲಾಗುತ್ತದೆ – ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.