WhatsApp Channel Join Now
Telegram Group Join Now

PM Kisan 18th Installment Date 2024: 18ನೇ ಕಂತಿನ ಹಣ ಯಾವಗ ಬರಲಿದೆ; ಇಲ್ಲಿದೇ ಮಾಹಿತಿ

ಕೇಂದ್ರ ಸರ್ಕಾರದ ‌ವಿವಿಧ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 18ನೇ ಕಂತಿಗಾಗಿ ಹಣವನ್ನು ಶೀಘ್ರದಲ್ಲೇ ರೈತರ ಖಾತೆಗೆ‌ ಬಿಡುಗಡೆ ಮಾಡಲಾಗುತ್ತದೆ. ಲೋಕಸಭಾ ಚುನಾವಣೆಯು ಮುಗಿದ ನಂತರ ಮೋದಿ 3.0 ಸರ್ಕಾರವು ರಚನೆಯಾಗಿದ್ದು, ಇದೇ ಜುಲೈ 23ರಂದು ನೂತನ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು ಮಂಡಿಸಲಿದ್ದಾರೆ. ಈ ಕಾರಣ 18ನೇ ಕಂತಿನ ಹಣವು ನವೆಂಬರ್ ವೇಳೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಪ್ರತಿ ರೈತರಿಗೆ ಪಕ್ಷಕ್ಕೆ 6 ಸಾವಿರ ಹಣ
ನೀಡುತ್ತಿರುವ ಕೇಂದ್ರ ಸರ್ಕಾರವು 8 ಸಾವಿರಕ್ಕೆ ಏರಿಸುವ ನಿರೀಕ್ಷೆ ಇದೆ. ಈ ಬದಲಾವಣೆಯನ್ನು ಮೊದಲ ಬಜೆಟ್ ನಲ್ಲಿ ಪ್ರಕಟಿಸುವ ಸಾಧ್ಯತೆ ಇರುವುದರಿಂದ 18ನೇ ಕಂತಿನ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದಿಲ್ಲ.

Pm Kisan 18Th Installment Date 2024
Pm Kisan 18Th Installment Date 2024

ಕಳೆದ 17ನೇ ಕಂತನ್ನು ಈ ವರ್ಷದ ಜೂನ್ 18 ರಂದು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು .

PM-KISAN ಯೋಜನೆಯಡಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳನ್ನು ಪಡೆಯುತ್ತಾರೆ, ಇದು ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೀಡಲಾಗುತ್ತದೆ – ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

Also Read: ಪಿಎಂ ಕಿಸಾನ್ 18ನೇ ಕಂತಿನ ಸ್ಟೇಟಸ್ ಚೆಕ್ | PM Kisan Karnataka 18th Installment 2024 Payment Status Check Online

How to Check PM Kisan 18th Installment Status

ಫಲಾನುಭವಿಯ ಹಣದ ಕಂತಿನ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ -pmkisan.gov.in.
  • ನಂತರ, ಮುಖಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಟ್ಯಾಬ್ ಅನ್ನು ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ‘ಡೇಟಾ ಪಡೆಯಿರಿ’ ಆಯ್ಕೆಯನ್ನು ಆರಿಸಿ
  • ನಿಮ್ಮ ಫಲಾನುಭವಿಯ ಸ್ಥಿತಿಯು ಪರದೆಯ ಮೇಲೆ ಬರುತ್ತದೆ.

Important Direct Links:

Links NameIMP Links
PM Kisan Karnataka 18th Installment 2024 Check Online (Soon)Click Here
PM Kisan Beneficiary List 2024Click Here
Official Websitepmkisan.gov.in
More UpdatesKarnatakaHelp.in

Leave a Comment