ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು(ಎನ್‌ಟಿಎ) 2026ನೇ ಸಾಲಿನ ಯುಜಿಸಿ ನೆಟ್ ಜೂನ್ ಮಾಹೆಯ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 22ರಿಂದ 30ರವರೆಗೆ ಸಿಬಿಟಿ ಮೋಡ್‌ನಲ್ಲಿ ಪ್ರತಿದಿನ ಎರಡು ಪಾಳಿಗಳಲ್ಲಿ (ಬೆ.9 ರಿಂದ ಮ.12 ರವರೆಗೆ ಮತ್ತು ಮ.3ರಿಂದ ಸಂ.6 ರವರೆಗೆ) ನಡೆಸಲು ಸಂಸ್ಥೆ ನಿರ್ಧರಿಸಿದೆ. ಸದರಿ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಎನ್‌ಟಿಎ ಅಧಿಕೃತ ಜಾಲತಾಣ https://ugcnet.nta.nic.in/ದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಯುಜಿಸಿ ನೆಟ್ 2026 ಜೂನ್ ಮಾಹೆಯ ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ
• ಮೊದಲಿಗೆ ಅಭ್ಯರ್ಥಿಗಳು ಎನ್‌ಟಿಎ ಅಧಿಕೃತ ಜಾಲತಾಣ https://ugcnet.nta.nic.in/ಕ್ಕೆ ಭೇಟಿ ನೀಡಿ.
• ಬಳಿಕ ಸಾರ್ವಜನಿಕ ಸೂಚನೆಗಳು ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಯುಜಿಸಿ-ನೆಟ್ ಜೂನ್ 2026 ರ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯ ಕುರಿತು ಸಾರ್ವಜನಿಕ ಸೂಚನೆ* ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಪಿಡಿಎಫ್ ನಲ್ಲಿ ನೀಡಲಾಗಿರುವ ವಿಷಯವಾರು ವೇಳಾಪಟ್ಟಿಯನ್ನು ಪರಿಶೀಲಿಸಿ.
• ಪರೀಕ್ಷಾ ಕೇಂದ್ರದ ನಗರದ ಮಾಹಿತಿ ಅಧಿಸೂಚನೆಯನ್ನು ಸಿಬಿಟಿ ಪರೀಕ್ಷೆಗೆ 8 ರಿಂದ 10 ದಿನಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ.
• ಇದಾದ ಬಳಿಕ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುತ್ತದೆ.
Important Direct Links:
| UGC NET June 2026 Exam Schedule PDF | Download |
| Official Website | ugcnet.nta.nic.in |
| More Updates | Karnatakahelp.in |