ಪ್ರಸ್ತುತ ಸಾಲಿನ ಪಿಎಂ-ಕಿಸಾನ್ 19ನೇ ಕಂತಿನ ಹಣ(PM Kisan 19th Installment 2025 Amount)ವನ್ನು ಮಾನ್ಯ ಗೌರವಾನ್ವಿತ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ಫೆಬ್ರವರಿ 24 ರಂದು ಮಧ್ಯಾಹ್ನ: 02 – 3:30ಕ್ಕೆ ಡಿಜಿಟಲ್ ವರ್ಗಾವಣೆ ಮಾಡಲಿದ್ದಾರೆ. ಈ ಬಾರಿ 9.7 ಕೋಟಿಗಿಂತ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ದೇಶದ ರೈತರಿಗೆ ವರ್ಷದಲ್ಲಿ ಪ್ರತಿ 4 ತಿಂಗಳಿಗೊಮ್ಮೆ 2000 ರೂಪಾಯಿಯಂತೆ ಒಂದು ವರ್ಷದಲ್ಲಿ ಒಟ್ಟು 6000 ರೂಪಾಯಿಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ.