ಪ್ರಸಾರ ಭಾರತಿ ನೇಮಕಾತಿ 2025 – ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಸ್ಟ್ರಿಂಜರ್(ಅರೆಕಾಲಿಕ ವರದಿಗಾರ) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ ಕರ್ನಾಟಕದ 29 ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ಸ್ಟ್ರಿಂಜರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪ್ರಸಾರ ಭಾರತೀಯ ಅಧಿಕೃತ ವೆಬ್ಸೈಟ್ https://prasarbharati.gov.in/ಗೆ ಭೇಟಿ ನೀಡಿ. ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಆಫ್ಲೈನ್ ಮೂಲಕ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights of Employment News
Organization Name – Prasar Bharati
Post Name – Stringers
Total Vacancy – 29
Application Mode – Offline
Job Location – Bengaluru
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – 17-04-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -16-05-2025
ಶೈಕ್ಷಣಿಕ ಅರ್ಹತೆ ಹಾಗೂ ಅನುಭವ:
- ಸ್ಟ್ರಿಂಜರ್ ಗಳು ಕ್ಯಾಮೆರಾಮನ್‌ಗಳಾಗಿ ಮತ್ತು ಸುದ್ದಿಗಾರರಾಗಿ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆ ಮತ್ತು ಅನುಭವವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
- ಸ್ಟ್ರಿಂಜರ್ ಗಳು ಹೊಂದಿರುವ ಕ್ಯಾಮೆರಾ ಮತ್ತು ಪರಿಕರ ಉಪಕರಣಗಳು ಪ್ರಸ್ತುತ ತಾಂತ್ರಿಕ ಮಾನದಂಡಗಳನ್ನು ಹೊಂದಿರಬೇಕು.
- ಅರ್ಜಿದಾರರು ಇತ್ತೀಚಿನ ಪೂರ್ಣ HD/4K/UHD/NX ಸ್ವರೂಪದೊಂದಿಗೆ ತಮ್ಮದೇ ಆದ ವೃತ್ತಿಪರ ದರ್ಜೆಯ ವೀಡಿಯೊ ಕ್ಯಾಮೆರಾವನ್ನು ಹೊಂದಿರಬೇಕು.
- ಅರ್ಜಿದಾರರು ಕಾರ್ಡ್-ರೀಡರ್ ಮತ್ತು ನೆಟ್ ಡೇಟಾ ಪ್ಯಾಕ್‌ನೊಂದಿಗೆ 4G/5G ಸಿಮ್‌ನೊಂದಿಗೆ ಗುಣಮಟ್ಟದ ಸ್ಮಾರ್ಟ್ ಫೋನ್ ಹೊಂದಿರಬೇಕು
ವಯೋಮಿತಿ:
ಪ್ರಸಾರ ಭಾರತಿ ನಿಯಮಗಳ ಪ್ರಕಾರ ವಯೋಮಿತಿ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ಶಾರ್ಟ್ ಲಿಸ್ಟಿಂಗ್
- ದಾಖಲೆಗಳ ಪರಿಶೀಲನೆ
- ಸಂದರ್ಶನ
ಅರ್ಜಿ ಶುಲ್ಕ:
- ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – 1180 ರೂ.
ಅರ್ಜಿ ಶುಲ್ಕವನ್ನು ಪ್ರಸಾರ ಭಾರತಿ (IPSB) ದೂರದರ್ಶನ ಬೆಂಗಳೂರು ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
- ಪ್ರಸಾರ ಭಾರತೀಯ ಅಧಿಕೃತ ವೆಬ್ಸೈಟ್ https://prasarbharati.gov.in/pbvacancies/?section=Stringer+&subject= ಗೆ ಭೇಟಿ ನೀಡಿ.
- ಸ್ಟ್ರಿಂಗರ್ RNU DDK ಬೆಂಗಳೂರಿನಲ್ಲಿ ಸ್ಟಿಂಗರ್‌ಗಳ ತಾಜಾ ಎಂಪನೆಲ್ ಮೆಂಟ್ ಪಿಡಿಎಫ್ ಡೌನ್ಲೋಡ್ ಮಾಡಿ ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
- ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ನಮೂದಿಸಿ.
- ಅರ್ಜಿ ಶುಲ್ಕವನ್ನು ಪ್ರಸಾರ ಭಾರತಿ (IPSB) ದೂರದರ್ಶನ ಬೆಂಗಳೂರು ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಿ.
- ಅರ್ಜಿಗಳನ್ನು ಸ್ಪೀಡ್ ಪೋಸ್ಟ್/ನೋಂದಾಯಿತ ಪೋಸ್ಟ್ ಮೂಲಕ ನಿರ್ದೇಶಕರು ಸುದ್ದಿ, ಪ್ರಾದೇಶಿಕ ಸುದ್ದಿ ಘಟಕ, ದೂರದರ್ಶನ ಕೇಂದ್ರ, ಜೆ ಸಿ ನಗರ, ಬೆಂಗಳೂರು-560006 ಗೆ ಕಳುಹಿಸಬೇಕು.
Important Direct Links:
Official Notification and Application Form PDF | Download |
Official Website | prasarbharati.gov.in |
More Updates | Karnataka Help.in |