ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ ವಸತಿ ಸಹಿತ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ ವಸತಿಯುತ PSI ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ನೀಡುವ ಮೂಲಕ ರಾಜ್ಯಾದಾದ್ಯಂತ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಿಸಲು, ಅಭ್ಯರ್ಥಿಗಳ ಸುರಕ್ಷತಾ ದೃಷ್ಠಿಯಿಂದ ಕಲಿಕಾ ಪೂರಕ ವಾತಾವರಣ ಒದಗಿಸಲು, ಉತ್ತಮ ಫಲಿತಾಂಶ ಮತ್ತು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಅನುಕಾಲವಾಗುವಂತೆ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhuservices.karnataka.gov.inಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಲಾಗಿದೆ. ತಪ್ಪದೇ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
• ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ 07-06-2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15-06-2025
ಅರ್ಹತೆಗಳು:
- ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ರಾಜ್ಯ ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು.
- ಅಭ್ಯರ್ಥಿಯು ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
- ಎತ್ತರ – ಪುರುಷರಿಗೆ ಕನಿಷ್ಠ 168 ಸೆಂ.ಮೀ ಮತ್ತು ಮಹಿಳೆಯರಿಗೆ ಕನಿಷ್ಠ 157 ಸೆಂ.ಮೀ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 15-06-2025 ದೊಳಗೆ ಯು.ಜಿ.ಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡದಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
• ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
ಆಯ್ಕೆ ವಿಧಾನ:
- ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯದ ಬೆಳಗಾವಿ/ ಮೈಸೂರು ಕಂದಾಯ ವಿಭಾಗಗಳಲ್ಲಿ 90 ದಿನಗಳ ವಸತಿಯುತ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಸೇವಾ ಸಿಂಧು ಪೋರ್ಟಲ್ https://sevasindhuservices.karnataka.gov.in/login.do ಗೆ ಭೇಟಿ ನೀಡಿ.
- ಇ-ಮೇಲ್ ಐಡಿ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ.
- ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ಅರ್ಜಿ ಹುಡುಕಿ.
- ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಅಗತ್ಯ ಮಾಹಿತಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ
ಮೈಸೂರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಕಛೇರಿ, ಮೌಲಾನಾ ಅಜಾದ್ ಭವನ, ಸಿಎ ನಂ:01, ಶೋಭಾ ಗಾರ್ಡನ್ ಪಕ್ಕ, ಮೈಸೂರು-ಬೆಂಗಳೂರು ರಸ್ತೆ, ಮೈಸೂರು ಜಿಲ್ಲೆ-570007 ವಿಳಾಸಕ್ಕೆ ಭೇಟಿ ನೀಡಿ.
ಅಥವಾ
ದೂರವಾಣಿ ಸಂಖ್ಯೆ :- 0821- 2422088 / ಮೊಬೈಲ್ ಸಂಖ್ಯೆ :- 9620925247/ 8951087207 ಅನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Important Direct Links:
PSI Pre Recruitment Free Training 2025 Online Application Form Link | Apply Now |
Official Website | dom.karnataka.gov.in |
More Updates | Karnataka Help.in |