ರಾಮನಗರದ ಜಿಲ್ಲಾ ಕಾನೂನು ಸೇವೆಗಳ ಪ್ರದಿಕಾರದಲ್ಲಿ ಖಾಲಿ ಇರುವ ಅರೆಕಾಲಿಕ ಕಾನೂನು ಸ್ವಯಂಸೇವಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ರಾಮನಗರ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದಲ್ಲಿ ಒಟ್ಟು 175 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈ ಹುದ್ದೆಗಳು ಅರೆ ಕಾಲಿಕ ಸ್ವಯಂಸೇವಕರ ಯೋಜನೆಯ ನಿಯಮಗಳಿಗೆ ಒಳಪಟ್ಟಿವೆ. ಶಾಲಾ ಶಿಕ್ಷಕರು, ನಿವೃತ್ತ ಸರ್ಕಾರಿ ನೌಕರರು, ವೈದ್ಯರು, ವಿದ್ಯಾರ್ಥಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು, ಸೇವಾ ಮನೋಭಾವ ಇರುವ ಯಾವ ವ್ಯಕ್ತಿಯಾದರೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಜಿಲ್ಲೆಯ ಹಾಗೂ ಆಯಾ ತಾಲೂಕುಗಳಿಂದ ಗೌರವಧನವನ್ನು ನೀಡಲಾಗುತ್ತದೆ. ಗೌರವಧನದ ಆಧಾರದ ಮೇಲೆ ಮೂರು ವರ್ಷದ ಅವಧಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗಿನ ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of Ramanagara District Legal Services Authority Recruitment 2024
Organization Name – District Legal Services Authority Ramanagara
Post Name – Para Legal Volunteer Posts
Total Vacancy – 175
Application Process: Offline
Job Location – Ramanagara
Important Dates:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 05, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 20, 2024
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ರಾಮನಗರ – 100
ಚನ್ನಪಟ್ಟಣ – 25
ಕನಕಪುರ – 25
ಮಾಗಡಿ – 25
ಒಟ್ಟು 175 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ
ಅಕ್ಷರಸ್ಥರಿದ್ದು ಕನಿಷ್ಠ ಪಕ್ಷ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ವಸ್ತು ಸ್ಥಿತಿಯ ಬಗ್ಗೆ ಹಾಗೂ ಪರಿಸ್ಥಿತಿಯ ವಿಷಯಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವವರಾಗಿರಬೇಕು. ಯಾವುದೇ ಕ್ರಿಮಿನಲ್ ಅಪರಾಧದ ಹಿನ್ನೆಲೆವುಳ್ಳವರಾಗಿರಬಾರದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
- ಸ್ವ-ವಿವರ ಇರುವ ಅರ್ಜಿ,
- ಇತ್ತೀಚಿನ ಪಾಸ್ ಪೋರ್ಟ್ ಭಾವಚಿತ್ರ
- ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳು,
- ಕಾರ್ಯ ನಿರ್ವಹಿಸಲು ಇಚ್ಚಿಸುವ ಬಗ್ಗೆ ಸ್ವ-ಇಚ್ಚಾ ಪತ್ರ.
How to Apply for Ramanagara DLSA Recruitment 2024
ಅರ್ಜಿ ಸಲ್ಲಿಸುವುದು ಹೇಗೆ..?: ರಾಮನಗರ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಕಚೇರಿಯಲ್ಲಿ ಅರ್ಜಿ ನಮೂನೆಗಳನ್ನು ಪಡೆದುಕೊಂಡು ತಮ್ಮ ಸ್ವಂತ ಕೈ ಬರದಲ್ಲಿ ಭರ್ತಿ ಮಾಡಿ ಅರ್ಜಿ ಮತ್ತು ಸಂಬಂಧಪಟ್ಟ ದಾಖಲಾತಿಗಳೊಡನೆ ಸಲ್ಲಿಸಬಹುದು. ಮುಚ್ಚಿದ ಲಕೋಟೆಯಲ್ಲಿ ಅಂಚೆ ಮೂಲಕವೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ :
ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯದ ಆವರಣ, ರಾಮನಗರ – 562159
Official Notification & Form PDF | Download |
Official Website | DLSA Ramanagara |
More Updates | Karnataka Help.in |