SSLC ಯ ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಮೂರನೇ ಅವಕಾಶ ನೀಡಿದ್ದು, ಎಸ್‌ಎಸ್‌ಎಲ್‌ಸಿ ಮೂರನೇ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಪರೀಕ್ಷೆಗಳು ಆಗಸ್ಟ್ 2ರಿಂದ 9ರವರೆಗೆ ಬೆಳಗ್ಗೆ 10.15 ರಿಂದ 1:30ರವರೆಗೆ ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಮಂಡಳಿಯೂ ಪರೀಕ್ಷೆ 3ರ ವೇಳಾಪಟ್ಟಿಯನ್ನು ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ಪರೀಕ್ಷೆಯು ಹತ್ತಿರವಾಗುತ್ತಿದ್ದಂತೆ ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಈ ಲೇಖನದಲ್ಲಿ ನಾವು SSLC ಪರೀಕ್ಷೆ – 3 ವೇಳಾಪಟ್ಟಿಯ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
Important Dates of SSLC 2024 Examination-3
- ಪರೀಕ್ಷೆಗೆ ನೋಂದಣಿ ಪ್ರಾರಂಭ ದಿನಾಂಕ – ಜುಲೈ 10, 2024
- ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ – ಜುಲೈ 17, 2024
- 3ನೇ ಪರೀಕ್ಷೆಯ ದಿನಾಂಕಗಳು – ಆಗಸ್ಟ್ 2 ರಿಂದ 9, 2024 ರವರೆಗೆ
Also Read: SSLC Exam 3 Registration 2024: SSLC ಮೂರನೇ ಪರೀಕ್ಷೆಗೆ ನೊಂದಣಿ ಪ್ರಾರಂಭ; ಪರೀಕ್ಷಾ ದಿನಾಂಕಗಳು ಪ್ರಕಟ
SSLC Exam 3 Time Table 2024
ದಿನಾಂಕಗಳು | ವಿಷಯಗಳು |
---|---|
02-08-2024 | ಪ್ರಥಮ ಭಾಷೆ ವಿಷಯಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು ಇಂಗ್ಲಿಷ್, ಸಂಸ್ಕೃತ |
03-08-2024 | ತೃತೀಯ ಭಾಷೆ ವಿಷಯಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಶಿಯನ್ ಉರ್ದು, ಸಂಸ್ಕೃತ ,ಕೊಂಕಣಿ ,ತುಳು |
05-08-2024 | ರಾಜ್ಯಶಾಸ್ತ್ರ, ವಿಜ್ಞಾನ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ |
06-08-2024 | ಸಮಾಜ ವಿಜ್ಞಾನ |
07-08-2024 | ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ |
08-08-2024 | ಗಣಿತ, ಸಮಾಜಶಾಸ್ತ್ರ |
09-08-2024 | ಅರ್ಥಶಾಸ್ತ್ರ ,ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್ ಗ್ರಾಫಿಕ್ಸ್, ಪ್ರೋಗ್ರಾಮಿಂಗ್ ಇನ್ ANSI ‘C’, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ |
Important Direct Links:
SSLC 2024 Examination-3 Time Table PDF | Download |
Official Website | kseab.karnataka.gov.in |
More Updates | KarnatakaHelp.in |