ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತ(ಎನ್‌ಟಿಪಿಸಿ)ದ ಹುದ್ದೆಗಳ ನೇಮಕಾತಿಗಾಗಿ ಮಾ.16 ರಿಂದ 27ರವರೆಗೆ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ ಕೀ ಉತ್ತರವನ್ನು ಸೋಮವಾರ ಪ್ರಕಟಿಸಿದೆ.
ಸಿಇಎನ್ ಸಂಖ್ಯೆ 06/2025ರಡಿ ಅಧಿಸೂಚಿಸಲಾದ ಒಟ್ಟು 5810 ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ನಡೆಸಲಾಗಿತ್ತು. ಪ್ರಕಟಿತ ಕೀ ಉತ್ತರಗಳಿಗೆ ಏ.12ರೊಳಗೆ ಪ್ರತಿ ಪ್ರಶ್ನೆಗೆ ₹50ರಂತೆ ಜೊತೆಗೆ ಬ್ಯಾಂಕಿನ ಸೇವಾ ಪಾವತಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆರ್‌ಆರ್‌ಬಿ ಆಯಾ ಪ್ರಾದೇಶಿಕ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ.
• ಮೊದಲಿಗೆ ಅಭ್ಯರ್ಥಿಗಳು ಆರ್.ಆರ್.ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281 ಕ್ಕೆ ಭೇಟಿ ನೀಡಿ.
• ನಂತರ ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್.ಆರ್.ಬಿ ಅಧಿಕೃತ ಜಾಲತಾಣವನ್ನು ಆಯ್ಕೆ ಮಾಡಿ.
• ಬಳಿಕ “ಸಿಇಎನ್ ಸಂಖ್ಯೆ 06/2025 ತಾಂತ್ರಿಕೇತರ ಜನಪ್ರಿಯ ವರ್ಗಗಳ (ಪದವಿ) ವಿವಿಧ ಹುದ್ದೆಗಳ ನೇಮಕಾತಿ” ವಿಭಾಗದ ಕೆಳಗೆ ನೀಡಲಾಗಿರುವ *ಉತ್ತರ ಕೀಲಿಯನ್ನು ವೀಕ್ಷಿಸಲು/ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ* ಆಯ್ಕೆ ಮಾಡಿ. (ಅಥವಾ ನೇರವಾಗಿ https://rrb.digialm.com/EForms/configuredHtml/33128/98228/login.html ಲಿಂಕ್ ಗೆ ಭೇಟಿ ನೀಡಿ)
• ನಂತರ ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.
• ಕೀಲಿ ಉತ್ತರಗಳನ್ನು ಪರಿಶೀಲಿಸಿ, ನಂತರ ಸದರಿ ಪ್ರಕಟಿತ ಕೀ ಉತ್ತರಗಳಲ್ಲಿ ಅಸಮಧಾನವಿದ್ದಲ್ಲಿ, ಆಕ್ಷೇಪಣೆ ಸಲ್ಲಿಕೆಯ ನಿಗದಿತ ಶುಲ್ಕ ಪಾವತಿಸಿ ಆಕ್ಷೇಪಣೆಯನ್ನು ಸಲ್ಲಿಸಬಹುದು.
Good job