ಹೊಸಪೇಟೆ: ಇಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ(ಡಿಸಿಸಿ ಬ್ಯಾಂಕ್)ವು ಕಲ್ಯಾಣ ಕರ್ನಾಟಕ ಮತ್ತು ಮೂಲ ಉಳಿಕೆ ವೃಂದದಡಿ ನಾನಾ ಹುದ್ದೆಗಳ ನೇರ ನೇಮಕಾತಿಗಾಗಿ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ವ್ಯವಸ್ಥಾಪಕ/ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) 22 ಸ್ಥಾನಗಳು, ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) 28 ಸ್ಥಾನಗಳು, ಓರ್ವ ವಾಹನ ಚಾಲಕ, ಕಿರಿಯ ಸೇವಕರು 31 ಸ್ಥಾನಗಳಿಗೆ ಸೇರಿದಂತೆ ಒಟ್ಟು 82 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಯಾವುದೇ ಪದವಿ/ಪಿಯುಸಿ/ಎಸ್ಸೆಸ್ಸೆಲ್ಸಿ ಅರ್ಹತೆ ಹೊಂದಿರುವವರು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಲಿಂಕ್(https://manageexam.com/BDCCB/index.html) ಮೂಲಕ ಜೂ.30ರೊಳಗೆ ಅರ್ಜಿ ಸಲ್ಲಿಸಬಹುದು.
ಸರ್ಕಾರದ ಆದೇಶದಂತೆ, ರೋಸ್ಟರ್ ಬಿಂದು ಮತ್ತು ಒಳ ಮೀಸಲಾತಿಯನ್ನು ಅನ್ವಯಿಸಿ ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಮುಖ್ಯ ನಿರ್ವಾಹಣಾಧಿಕಾರಿಗಳು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಜೂನ್ 01
- ಅರ್ಜಿ ಸಲ್ಲಿಸಲು ಕೊನೆ ದಿನ – ಜೂನ್ 30
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ಮಂಡಳಿ/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹುದ್ದೆಗಳ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.
ವ್ಯವಸ್ಥಾಪಕ/ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ)- ಯಾವುದೇ ಪದವಿ
ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ)- ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ
ವಾಹನ ಚಾಲಕ- ಎಸ್ಸೆಸ್ಸೆಲ್ಸಿ (ಕನ್ನಡ ಒಂದು ಭಾಷೆಯಾಗಿ ಓದಿರಬೇಕು) ಜೊತೆಗೆ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.
ಕಿರಿಯ ಸೇವಕ- ಎಸ್ಸೆಸ್ಸೆಲ್ಸಿ (ಕನ್ನಡ ಒಂದು ಭಾಷೆಯಾಗಿ ಓದಿರಬೇಕು)
ವಯೋಮಿತಿ:
30-06-2026ರಂತೆ;
ಕನಿಷ್ಠ 18 ವರ್ಷಗಳು
ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ಪ್ರವರ್ಗ-I ರ ಅಭ್ಯರ್ಥಿಗಳಿಗೆ 40 ವರ್ಷ
ಇತರೆ ಹಿಂದುಳಿದ ವರ್ಗಗಳಾದ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷ
ಇತರೆ ಅಭ್ಯರ್ಥಿಗಳಿಗೆ 35 ವರ್ಷ
ಸರ್ಕಾರಿ ನಿಯಮಗಳ ಪ್ರಕಾರ, ವಿಕಲಚೇತನ(10 ವರ್ಷ), ವಿಧವೆ ಮಹಿಳೆ(10 ವರ್ಷ) ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
ಸಂಬಳ:
ವ್ಯವಸ್ಥಾಪಕ/ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) ಹುದ್ದೆಗೆ ₹44425 ರಿಂದ ₹83700.
ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) ಹುದ್ದೆಗೆ ₹34100 ರಿಂದ ₹67600
ವಾಹನ ಚಾಲಕ ಹುದ್ದೆಗೆ ₹31775 ರಿಂದ ₹61300
ಕಿರಿಯ ಸೇವಕ ಹುದ್ದೆಗೆ ₹29600 ರಿಂದ ₹52800
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಇತರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹ 1,000
ಪ.ಜಾತಿ, ಪ.ಪಂಗಡ, ಪ್ರವರ್ಗ-1, ಹಾಗೂ ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹500
ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ..?
ಹಂತ-1 ಅಧಿಕೃತ ವೆಬ್‌ಸೈಟ್ https://www.bellarydcc.bank.in/ಗೆ ಭೇಟಿ.
ಹಂತ- 2 ಮುಂದೆ ಮುಖಪುಟದ “Notification” ಅಥವಾ “Recruitment 2026” ವಿಭಾಗದಲ್ಲಿ ನೀಡಲಾದ “Click here to submit application” ಲಿಂಕ್ ಮೇಲೆ ಒತ್ತಿ, ನಂತರ ಅಲ್ಲಿ “https://manageexam.com/BDCCB/index.html” ಈ ಲಿಂಕ್‌ನ ಹೊಸಪುಟ ತೆರೆಯುತ್ತದೆ.
ಹಂತ-3 ಹೊಸ ಬಳಕೆದಾರಾಗಿದ್ದರೆ “ಅರ್ಜಿ ನೋಂದಣಿಗೆ ಇಲ್ಲಿ ಕ್ಲಿಕ್ಕಿಸಿ” ಮೇಲೆ ಒತ್ತಿ ನೋಂದಣಿ ಮಾಡಿಕೊಳ್ಳಿ. ತದನಂತರ ಲಾಗಿನ್‌ಮಾಡಲು “ರಿ ಲಾಗ್‌ಇನ್” ಬಳಸಬಹುದು.
ಹಂತ-4 ಕೊನೆಗೆ ಅರ್ಜಿ ನಮೂನೆ ತೆರೆಯುತ್ತದೆ. ನಮೂನೆಯಲ್ಲಿ ಕೇಳಲಾದ ಎಲ್ಲಾ ಸಂಪೂರ್ಣ ಮಾಹಿತಿ ತುಂಬಿ, ಮುಖ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ನಿಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಅಭ್ಯರ್ಥಿಗಳ ಗಮನಕ್ಕೆ: ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ಸಮಸ್ಯೆ ಎದುರಾದಲ್ಲಿ ಕಚೇರಿ ಸಮಯದಲ್ಲಿ ಸಹಾಯವಾಣಿ ಸಂಖ್ಯೆಗಳಿಗೆ: 98804 21742, 91872 35482 ಅಥವಾ ಇ-ಮೇಲ್: bdcc@gmail.com ವಿಳಾಸ ದ ಮೂಲಕ ಸಂಪರ್ಕಿಸಬಹುದು.
Important Direct Links:
| Official Notification PDF(Revised) | Download |
| Online Application Form Link | Apply Now |
| Official Website | www.bellarydcc.bank.in |
| More Updates | Karnatakahelp.in |
Job description and application requirements for you please
Job
Job
in come
5 11 2006
Iti