ಬೆಳಗಾವಿ ಡಿಸಿಸಿ ಬ್ಯಾಂಕ್: ಎಸ್‌ಡಿಎ, ಸಿಪಾಯಿ, ಗನ್‌ಮ್ಯಾನ್ ನೇಮಕಾತಿ
ಬೆಳಗಾವಿ: ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ(83), ಸಿಪಾಯಿ(20) ಮತ್ತು ಓರ್ವ ಬಂದೂಕುಧಾರಿ ಸೇರಿದಂತೆ ಒಟ್ಟು 104 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ, ಬಿಎ,ಬಿಎಸ್ಸಿ, ಬಿ.ಕಾಂ ಪದವೀಧರ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣ (https://belagavidccb.com/ ಅಥವಾ https://virtualofficeerp.com/bgccb2026/)ದ ಮೂಲಕ ಆ.27ರೊಳಗೆ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಹಂತಗಳ ಮುಖೇನ ಆಯ್ಕೆ ಮಾಡಿಕೊಳ್ಳಲಾಗುವುದು. ಆಫ್‌ಲೈನ್ … More