ಬೆಳಗಾವಿ ಡಿಸಿಸಿ ಬ್ಯಾಂಕ್‌: ಎಸ್‌ಡಿಎ, ಸಿಪಾಯಿ, ಗನ್‌ಮ್ಯಾನ್‌ ನೇಮಕಾತಿ

ಅರ್ಜಿ ಸಲ್ಲಿಕೆಗೆ ಆ.27ರ ಗಡುವು

Published on:

Updated On:

ಬೆಳಗಾವಿ: ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿಯಮಿತದಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ(83), ಸಿಪಾಯಿ(20) ಮತ್ತು ‌ಓರ್ವ ಬಂದೂಕುಧಾರಿ ಸೇರಿದಂತೆ ಒಟ್ಟು 104 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಸ್ಸೆಸ್ಸೆಲ್ಸಿ, ಬಿಎ,ಬಿಎಸ್ಸಿ, ಬಿ.ಕಾಂ ಪದವೀಧರ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣ (https://belagavidccb.com/ ಅಥವಾ https://virtualofficeerp.com/bgccb2026/)ದ ಮೂಲಕ ಆ.27ರೊಳಗೆ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಹಂತಗಳ ಮುಖೇನ ಆಯ್ಕೆ ಮಾಡಿಕೊಳ್ಳಲಾಗುವುದು. ಆಫ್‌ಲೈನ್‌ ಅರ್ಜಿ ಸಲ್ಲಿಕೆ ಇರುವುದಿಲ್ಲ ಎಂದು ಮುಖ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಜುಲೈ 27 ಬೆಳಗ್ಗೆ 10:30ರಿಂದ
  • ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಗೆ ಕೊನೆದಿನ – ಆಗಸ್ಟ್‌ 27

ವಿದ್ಯಾರ್ಹತೆ:

ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಯು ಬಿಎ, ಬಿ.ಎಸ್ಸಿ, ಬಿ.ಕಾಂ ಪದವಿ ಹೊಂದಿರಬೇಕು.

ಸಿಪಾಯಿ ಹುದ್ದೆಗೆ; ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ.

ಬಂದೂಕುಧಾರಿ(ಗನ್‌ಮ್ಯಾನ್‌) ಹುದ್ದೆಗೆ; ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳಿಂದ ನಿವೃತ್ತರಾದ ಮಾಜಿ ಸೈನಿಕರಾಗಿಬೇಕು ಮತ್ತು ಚಾಲ್ತಿಯಲ್ಲಿರುವ ಬಂದೂಕು ಪರವಾನಗಿ(Valid Arm License) ಹೊಂದಿರಬೇಕು.

ವಯಸ್ಸಿನ ಮಿತಿ:

27-08-2026ರಂತೆ; ಕನಿಷ್ಠ 18 ವರ್ಷಗಳು

ಗರಿಷ್ಠ ವಯೋಮಿತಿ ಇಂತಿದೆ;

ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷ
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ವರ್ಗದವರಿಗೆ 38 ವರ್ಷ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಮೌಖಿಕ ಸಂದರ್ಶನ
  • ದಾಖಲಾತಿ ಪರಿಶೀಲನೆ

ಸಂಬಳ:

ಎಸ್‌ಡಿಎ ಹುದ್ದೆಗೆವೇತನ ಶ್ರೇಣಿ: ರೂ.53150-115150/-
ಸಿಪಾಯಿ ಹುದ್ದೆಗೆವೇತನ ಶ್ರೇಣಿ: ರೂ.42650-96650/-
ಗನ್‌ಮ್ಯಾನ್‌ ಹುದ್ದೆಗೆವೇತನ ಶ್ರೇಣಿ: ರೂ.47650-105650/-

ಅರ್ಜಿ ಶುಲ್ಕ:

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.500/-
ಇನ್ನುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000/-

ಅರ್ಜಿ ಸಲ್ಲಿಕೆ ಹೇಗೆ.?

ಅರ್ಹ ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ https://virtualofficeerp.com/bgccb2026/ಲಿಂಕ್‌ಗೆ ಭೇಟಿ ನೀಡಿ. ಹೊಸ ಬಳಕೆದಾರರಾಗಿ ನೋಂದಣಿಯಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಸಹಾಯವಾಣಿ ಸಂಖ್ಯೆ(Help Line): 9187463509ಗೆ ಸಂಪರ್ಕಿಸಬಹುದು.

Important Direct Links:

Official Notification PDFDownload
Online Application Form LinkApply Now
Official Websitebelagavidccb.com
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

3 thoughts on “ಬೆಳಗಾವಿ ಡಿಸಿಸಿ ಬ್ಯಾಂಕ್‌: ಎಸ್‌ಡಿಎ, ಸಿಪಾಯಿ, ಗನ್‌ಮ್ಯಾನ್‌ ನೇಮಕಾತಿ”

  1. ಬ್ಯಾಂಕ್ ಇಂಡಿಯಾ ಕಂಪನಿಗಳು ತಮ್ಮ ಹಣದ ಹಣ ಹೂಡಿಕೆ ಮಾಡಲು ಅವಕಾಶ ನೀಡಿವೆ ಎಂಬುದು ನನ್ನ ಅಭಿಪ್ರಾಯ ಮತ್ತು ಅವರು ನಿಮ್ಮ ಮನೆಯಲ್ಲಿ ಇದ್ದರೆ

    Reply

Leave a Comment