ಹೋಮಿಯೋಪತಿ, ಆಯುರ್ವೇದ ತಜ್ಞ ವೈದ್ಯರ ನೇಮಕಾತಿ

Published on:

ಕೋಲಾರ: ಜಿಲ್ಲಾ ಆಯುಷ್ ಇಲಾಖೆ ವ್ಯಾಪ್ತಿಯಡಿ ಬರುವ ಆಯುಷ್ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಖಾಲಿ ಇರುವ ಹೋಮಿಯೋಪತಿ ತಜ್ಞ ವೈದ್ಯ ಮತ್ತು ಆಯುರ್ವೇದ ತಜ್ಞ ವೈದ್ಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ ಹಾಗೂ ಶ್ರೀನಿವಾಸಪುರ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಸಂಬಂಧಿತ ವಿಷಯದಲ್ಲಿ ಎಂಎಸ್‌/ಎಂಡಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://kolar.nic.in/en/notice category/recruitments/ನಲ್ಲಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳು, ಜಿಲ್ಲಾ ಆಯುಷ್ ಕಛೇರಿ, ಎಸ್.ಎನ್.ಆರ್ ಆಸ್ಪತ್ರೆ ಆವರಣ, ಕೋಲಾರ-563101 ಇಲ್ಲಿಗೆ ಕಚೇರಿ ಅವಧಿಯಲ್ಲಿ ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಆ.20ರೊಳಗೆ ತಲುಪಿಸಬೇಕು ಎಂದು ಕೋರಲಾಗಿದೆ.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 20
  • ಅರ್ಜಿ ಸಲ್ಲಿಸಲು ಕೊನೆ ದಿನ – ಆಗಸ್ಟ್‌ 20

ವಿದ್ಯಾರ್ಹತೆ:

ಹೋಮಿಯೋಪತಿ ತಜ್ಞ ವೈದ್ಯ ಹುದ್ದೆಗೆ; ಎಂಎಸ್/ಎಂಡಿ ಸ್ನಾತಕೋತ್ತರ ಪದವಿ ಹೊಂದಿರತಕ್ಕದ್ದು, ಸ್ನಾತಕೋತ್ತರ ಪದವೀಧರರು ಲಭ್ಯವಿಲ್ಲದಿದ್ದರೆ, ಕನಿಷ್ಠ 3 ವರ್ಷಗಳ ಅನುಭವದೊಂದಿಗೆ, PG Allowance ರಹಿತವಾಗಿ BHMS ಪದವಿಯನ್ನು ಪರಿಗಣಿಸಲಾಗುವುದು.

ಆಯುರ್ವೇದ ತಜ್ಞ ವೈದ್ಯ ಹುದ್ದೆಗೆ; ಎಂಎಸ್ ಇನ್ ಶಲ್ಯತಂತ್ರ ಅಥವಾ ಎಂಡಿ ಇನ್ ಪಂಚಕರ್ಮ /ಕಾಯಚಿಕಿತ್ಸಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.‌

ವಯಸ್ಸಿನ ಮಿತಿ:

20-08-2026ರಂತೆ; ಕನಿಷ್ಠ 18 ವರ್ಷಗಳು

ಗರಿಷ್ಠ ವಯೋಮಿತಿ;

ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ
ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 45 ವರ್ಷ

ಅಂಗವಿಕಲ ಅಭ್ಯರ್ಥಿ ಅಥವಾ ವಿಧವೆಯಾಗಿದ್ದಲ್ಲಿ 10 ವರ್ಷಗಳು ವಯೋಮಿತಿ ಸಡಿಲಿಕೆ.

ಆಯ್ಕೆ ಪ್ರಕ್ರಿಯೆ:

ಮೆರಿಟ್, ಅನುಭವ ಹಾಗೂ ಸಂದರ್ಶನದ (ಕ್ರಮವಾಗಿ 70%, 20%, 10%) ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಸಂಬಳ:

ಹೋಮಿಯೋಪತಿ ತಜ್ಞ ವೈದ್ಯ ಹುದ್ದೆಗೆ; ರೂ.52,550/- + 5,000 (PG allowance)
ಆಯುರ್ವೇದ ತಜ್ಞ ವೈದ್ಯ ಹುದ್ದೆಗೆ; ರೂ.52,550/- + 5,000 (PG allowance)

ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ 08152-200025ಗೆ ಅಥವಾ ಇ-ಮೇಲ್‌ ವಿಳಾಸ:dao.kolar09@gmail.comಕ್ಕೆ ಸಂಪರ್ಕಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Important Direct Links:

Official Notification and Application Form PDFDownload
Official Websitekolar.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment